ಭರತ ಖಂಡದ ತುತ್ತ ತುದಿಯ ಕಾಶ್ಮೀರದ ನೀಲಂ ಕಣಿವೆಯ ತ್ರಿತ್ವಾಲ್‌ನ ನವೀಕೃತ ಶ್ರೀಶಾರದಾದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಡುವ ನೂತನ ಶ್ರೀಶಾರದಾದೇವಿ ವಿಗ್ರಹಕ್ಕೆ ವಿಶೇಷ ಪೂಜೆ ಹಾಗೂ ಹಸ್ತಾಂತರ ಕಾರ್ಯ ವಿಜಯ ದಶಮಿಯಂದು ಶೃಂಗೇರಿಯಲ್ಲಿ ನಡೆಯಲಿದೆ.
ಈ ದೇವಸ್ಥಾನ ನಿರ್ಮಾಣದ ಹೊಣೆಯನ್ನು ಶ್ರೀಮಠ ವಹಿಸಿಕೊಂಡಿದ್ದು, ಕಾಮಗಾರಿ ಬಹುತೇಕ ಮುಗಿದಿದೆ. ಛಾವಣಿ ನಿರ್ಮಾಣ ವಷ್ಟೇ ಬಾಕಿಯಿದ್ದು, ಅಕ್ಟೋಬರ್ ಮಾಸಾಂತ್ಯಕ್ಕೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.
ಪಂಚಲೋಹದಲ್ಲಿ ನಿರ್ಮಿತ ನೂತನ ಶ್ರೀದೇವಿಯ ವಿಗ್ರಹ ವನ್ನು ಶೃಂಗೇರಿ ಶ್ರೀ ಮಠ ದಿಂದ ನೀಡಲಾ ಗುತ್ತಿದೆ. ವಿಜಯ ದಶಮಿ ಶುಭ ದಿನವಾದ ಬುಧವಾರ ವಿಶೇಷ ಪೂಜೆ ಸಲ್ಲಿಸಿ ತ್ರಿತ್ವಾಲ್‌ನ ಶಾರದಾ ಸಂರಕ್ಷಣಾ ಸಮಿತಿಯ ರವೀಂದ್ರ ಪಂಡಿತ್ ಮತ್ತು ತಂಡದವರಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.