ಚಾಮುಂಡಿ ಬೆಟ್ಟ :
ಪ್ರಸ್ತುತ ಮೈಸೂರು ನಗರಕ್ಕೆ ಹೊಂದಿಕೊಂಡಂತೆ ಕ್ರಮೇಣ ನಗರ ಬೆಟ್ಟದ ಸುತ್ತ ಹರಡಿಕೊಳ್ಳುತ್ತಿದ್ದಂತೆ ಮೈಸೂರು ನಗರದ ಮದ್ಯ ಭಾಗದಲ್ಲಿದ್ದಂತೆ ಭಾಸವಾಗುತ್ತಿದೆ.
ಮೈಸೂರಿನ ಆಗ್ನೇಯಕ್ಕೆ ಪೂರ್ವಪಶ್ಚಿಮವಾಗಿ ಹಬ್ಬಿಕೊಂಡಿರುವ ಈ ಬೆಟ್ಟ ಸುಮಾರು 1073 ಮೀಟರ್ ಎತ್ತರವಿದೆ . ಬೆಟ್ಟದಸುತ್ತಲೂ ದಟ್ಟವಲ್ಲದಿದ್ದರೂ ಅರೆ ಅರಣ್ಯ ಪ್ರದೇಶವಿದೆ .ಈ ಅರಣ್ಯ ವನ್ನು ಚಾಮುಂಡೇಶ್ವರಿ ರಕ್ಷಿತಾರಣ್ಯ ಪ್ರದೇಶವಾಗಿ ಪರಿಗಣಿಸಲಾಗಿದ್ದು ಅನೇಕ ವನ್ಯ ಜೀವಿಗಳಿಗೆ ಆಶ್ರಯ ತಾಣವಾಗಿದೆ . ವಿಶಿಷ್ಟವಾಗಿ ಚಿರತೆ ಗಳು ಹಾಗೂ ವಿಷಯುಕ್ತ ಹಾವುಗಳು ಹೇರಳ ಎಂಬ ವದಂತಿ ಪ್ರಚಲಿತ ವಾಗಿದೆ .
ಪುರಾಣ ಪ್ರಸಿದ್ದವಾದ ಈ ಬೆಟ್ಟ ಪ್ರದೇಶ ಮಹಿಷಾಸುರ ಎಂಬ ಬಲಿಷ್ಠ ರಾಕ್ಷಸ ರಾಜ ನ ಆಳ್ವಿಕೆಗೆ ಒಳಪಟ್ಟಿತ್ತು . ಅವನ ದಬ್ಬಾಳಿಕೆ , ದೌರ್ಜನ್ಯ, ಉಪಟಳ ಕ್ಕೆ ಇತಿಶ್ರೀ ಹಾಡಲು ಶಕ್ತಿ ದೇವತೆ ಚಾಮುಂಡಿಯ ಅವತಾರ ತಾಳಿ ಉಗ್ರ ಯುದ್ಧ ಮಾಡಿ ಮಹಿಷಾಸುರನನ್ನು ಕೊಂದು ಜನರನ್ನು ರಕ್ಷಿಸಿ ದಳೆಂಬುದು ಪುರಾಣ ಪ್ರತೀತ. ಹಾಗಾಗಿ ಈ ಬೆಟ್ಟ ಚಾಮುಂಡಿ ಬೆಟ್ಟವೆಂದು ಪ್ರಸಿದ್ಧವಾಯಿತು . ಚಾಮುಂಡೇಶ್ವರಿ ಆರಾಧನೆಗೆ ಚಾಮುಂಡೇಶ್ವರಿ ದೇವಸ್ಥಾನವು ಸಹ ನಿರ್ಮಾಣಗೊಂಡಿತು.
ಇದಕ್ಕೂ ಪೂರ್ವ ಈ ಬೆಟ್ಟವನ್ನು ಮಹಾಬಲಚಲ”ವೆಂದು ಕರೆಯುತ್ತಿದ್ದರು . ಬೆಟ್ಟದ ಮೇಲೆ ಮಹಾಬಲೇಶ್ವರ ದೇವಸ್ಥಾನವಿದೆ .ಈ ದೇವಸ್ಥಾನ 10 ನೇ ಶತಮಾನದ ಪೂರ್ವದಲ್ಲೇ ನಿರ್ಮಾಣ ಗೊಂಡಿದ್ದು ಪುಣ್ಯ ಕ್ಷೇತ್ರವೆಂದು ಪರಿಗಣಿಸ ಲಾಗಿರುವುದಕ್ಕೆ ಹಾಗೂ 1128 ರಲ್ಲಿ ದತ್ತಿ ನೀಡಿರುವುದರ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ .
ಈ ಬೆಟ್ಟದಮೇಲೆ ಹೋಗಲು ಸುಮಾರು 1008 ಕಲ್ಲಿನ ಮೆಟ್ಟಲುಗಳಿವೆ . ಶಿವನ ವಾಹನ ನಂದಿ , ,ಮಹಿಷಾಸುರನ ಮೂರ್ತಿಗಳನ್ನೂ ಸಹ ಸ್ಥಾಪಿಸಲಾಗಿದೆ . 3000 ಅಡಿ ಎತ್ತರವಿರುವ ಬೆಟ್ಟದ ಮೇಲ್ನಿಂತು ಮೈಸೂರು ನಗರದ ಸುಂದರ ವಿಹಂಗಮ ನೋಟ ವನ್ನು ವೀಕ್ಷಿಸುವುದೇ ಒಂದು ಸಂಭ್ರಮ .
ಚಾಮುಂಡಿಬೆಟ್ಟ ಮೈಸೂರಿನ ಪ್ರಮುಖ
ಯಾತ್ರಾಸ್ಥಳ ಮತ್ತು ಪ್ರಮುಖ ಆಕರ್ಷಣೆ .
ಲೇ: ಎಂ ತುಳಸಿರಾಂ .