ಶಿವಮೊಗ್ಗ: ವಾಸವಿ ಅಕಾಡೆಮಿ ಟ್ರಸ್ಟ್, ಕೋಟೆ ರಸ್ತೆ, ಶಿವಮೊಗ್ಗ, ಅಜೇಯ ಸಂಸ್ಕೃತಿ ಬಳಗ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಸಹಯೋಗದಲ್ಲಿ ವಾಸವಿ ವಿದ್ಯಾಲಯ, ಕೋಟೆ ರಸ್ತೆ, ಶಿವಮೊಗ್ಗ ಇಲ್ಲಿ ನವದೆಹಲಿಯ ಕೇಂದ್ರೀಯ ವಿಶ್ವ ವಿದ್ಯಾಲಯದ ಪಠ್ಯಕ್ರಮ ಆಧಾರದ ಮೇಲೆ ಎರಡು ವರ್ಷದ ಸಂಸ್ಕೃತ ಶಿಕ್ಷಣವನ್ನು ಅಕ್ಟೋಬರ್ ತಿಂಗಳಿಂದ ಪ್ರಾರಂಭಿಸಲಾಗುವುದು.
ಕೇವಲ ಎರಡೇ ವರ್ಷಗಳಲ್ಲಿ ಸಂಸ್ಕೃತದಲ್ಲಿ ಮಾತನಾಡಲು ಬರೆಯಲು ಮತ್ತು ಓದಲು ಕಲಿಸಿಕೊಡಲಾಗುವುದು ವಾರದಲ್ಲಿ ಮೂರು ದಿನ ತರಗತಿಗಳನ್ನು ಎರಡು ತಂಡಗಳಲ್ಲಿ ನಡೆಸಲಾಗುವುದು ಸೋಮ, ಮಂಗಳ ಬುಧವಾರ, ಹಾಗೂ ಗುರು, ಶುಕ್ರ, ಶನಿವಾರ ಸಂಜೆ 6.30 ರಿಂದ 8 ರವರೆಗೆ ತರಗತಿಗಳು ನಡೆಯಲಿದೆ. 15 ವರ್ಷ ಮೇಲ್ಪಟ್ಟ ಯಾರೇ ಆಗಲಿ ಈ ಯೋಜನೆಗೆ ಸೇರಬಹುದು ಪ್ರತಿ ತಂಡದಲ್ಲೂ ಕೇವಲ 30 ಜನರಿಗೆ ಮಾತ್ರ ಅವಕಾಶ ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು.
ವಾರ್ಷಿಕ ಶುಲ್ಕ ರೂ. 500.00 ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ನವದೆಹಲಿಯ ಕೇಂದ್ರೀಯ ವಿಶ್ವ ವಿದ್ಯಾಲಯದ ಪ್ರಮಾಣ ಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿಜಯೇಂದ್ರ ರಾವ್ 9448790127 ಇವರನ್ನು ಸಂಪರ್ಕಿಸಬಹುದು ಎಂದು ವಾಸವಿ ಅಕಾಡೆಮಿಯ ಟ್ರಸ್ಟ್ ಕಾರ್ಯದರ್ಶಿ ಎಸ್.ಕೆ.ಶೇಷಾಚಲ ತಿಳಿಸಿದ್ದಾರೆ.