ವಿಶೇಷ ಲೇಖನ: ಅರುಣ್ ಪ್ರಸಾದ್ ಹೊಂಬುಜ
28- ಸೆಪ್ಟೆಂಬರ್ -2022 ರಂದು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕಾ ವಿಶ್ವವಿದ್ಯಾಲಯದ ನೂತನ ಅವರಣದಲ್ಲಿ ಮೊದಲ ಘಟಿಕೋತ್ಸವ ಸಮಾರಂಭ ನಡೆಯಲಿದೆ, ಘನವೆತ್ತ ರಾಜ್ಯಪಾಲರಾದ ಗೆಹ್ಲೋಟ್ ಆಗಮಿಸಲಿದ್ದಾರೆ.
ಸದರಿ ವಿಶ್ವ ವಿಶ್ವವಿದ್ಯಾಲಯದ 7 ನೇ ಘಟಿಕೋತ್ಸವ ಇದು ಮೊದಲಿನ ಆರು ಘಟಿಕೋತ್ಸವ ಇರುವಕ್ಕಿಯ ನೂತನ ಕಾಂಪ್ಲೆಕ್ಸ್ ಕಾಮಗಾರಿ ಪೂರ್ಣವಾಗದ್ದರಿಂದ ಶಿವಮೊಗ್ಗದ ಕೃಷಿ ಕಾಲೇಜಿನ ಆವರಣದಲ್ಲೇ ನಡೆಸಲಾಗಿತ್ತು.
ಕೃಷಿ ವಿಶ್ವವಿದ್ಯಾಲಯಕ್ಕೆ ಜಿಲ್ಲೆಯಲ್ಲಿನ ಇರುವಕ್ಕಿ ಮತ್ತು ಹಾಯ್ ಹೊಳೆ ಹತ್ತಿರ ಭೂಮಿ ಗುರುತಿಸಲಾಗಿತ್ತು ಮತ್ತು ಹಾಯ್ ಹೊಳೆಯ ಭೂಮಿಯಲ್ಲೇ ಕೃಷಿ ವಿಶ್ವವಿದ್ಯಾಲಯ ಮಾಡಬೇಕೆಂಬ ಒತ್ತಡವಿತ್ತು ಕಾರಣ ಅಲ್ಲಿ ಬೇನಾಮಿ ಹೆಸರಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಭೂಮಿ ಖರೀದಿಸಿದ್ದರು ಅವರ ಭೂಮಿಗೆ ಬಂಗಾರದ ಬೆಲೆ ಬರಬೇಕೆಂದರೆ ಕೃಷಿ ವಿಶ್ವವಿದ್ಯಾಲಯ ಬರಬೇಕು ಎಂಬುದು.
ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿಯ ಇರುವಕ್ಕಿ ಗ್ರಾಮದಲ್ಲಿ ದಟ್ಟ ಅರಣ್ಯ ಇರುವ 777 ಎಕರೆ ರೆವಿನ್ಯೂ ಜಮೀನು ಕೃಷಿ ವಿಶ್ವವಿದ್ಯಾಲಯಕ್ಕೆ ಸೂಕ್ತವಾಗಿತ್ತು ಆದರೆ ರಿಯಲ್ ಎಸ್ಟೇಟ್ ಮಾಪಿಯಾ ಇರುವಕ್ಕಿಯಲ್ಲಿ ಕೃಷಿ ವಿಶ್ವವಿದ್ಯಾಲಯ ಮಾಡಬೇಡಿ ಎಂಬ ಪ್ರತಿಭಟನೆ ಮಾಡಿತ್ತು.
ಇದರ ಹೂರಣ ಅರಿತಿದ್ದ ಯಡ್ಯೂರಪ್ಪ ಮತ್ತು ಕಾಗೋಡು ತಿಮ್ಮಪ್ಪ ಸಾಗರ ತಾಲ್ಲೂಕಿನ ಇರುವಕ್ಕಿಯಲ್ಲೇ ಕೃಷಿ ವಿಶ್ವವಿದ್ಯಾಲಯಕ್ಕೆ ಜಾಗ ಮಂಜೂರು ಮಾಡಿಸಿದರು.
ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೃಷಿ ಮಂತ್ರಿ ಕೃಷ್ಣ ಬೈರೇಗೌಡರು ಹಣ ಮಂಜೂರು ಮಾಡಿದರು.
ಶಂಕುಸ್ಥಾಪನೆ ನೆರವೇರಿಸಿದವರು ಕೃಷಿ ಸಚಿವ ಕೃಷ್ಣ ಬೈರೇಗೌಡರು, ಇವರ ತಂದೆ ಬೈರೇಗೌಡರು ಕೃಷಿ ಮಂತ್ರಿಗಳಾಗಿದ್ದಾಗ 1996 – 97ರಲ್ಲಿ ಸಾಗರ ತಾಲ್ಲೂಕಿನಲ್ಲಿ ನಡೆದ ಭೂಸಾರ ಸಂರಕ್ಷಣಾ ಇಲಾಖೆಯ ಅವ್ಯವಹಾರ ಪರಿಶೀಲನೆಗೆ ಆನಂದಪುರಂ ಹೋಬಳಿಗೆ ಬಂದು 7 ಜನ ಕೃಷಿ ಇಲಾಖಾ ಅಧಿಕಾರಿಗಳನ್ನು ಜೈಲಿಗೆ ಕಳಿಸಿದ್ದರು.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲುಕಿನ ಈಸೂರಿನ ಚಿಂಡಿ ವಾಸುದೇವ ಈ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳು.
ಮೊದಲ ಪಾರಂ ಇನ್ ಚಾಜ್೯ ಹುಂಚಾ ಸಮೀಪದ ಡಾ.ಗಣಪತಿ.
ಮೊದಲ ಕಾನೂನು ಸಲಹೆಗಾರರು ರಿಪ್ಪನ್ ಪೇಟೆ ಸಮೀಪದ ಹಾಲಿ ಶಿವಮೊಗ್ಗದ ನ್ಯಾಯಾಲಯದಲ್ಲಿ ವಕೀಲರಾಗಿರುವ ಕುಬಟೂರು ರಾಮಚಂದ್ರ.
ಇರುವಕ್ಕಿಯ 777 ಎಕರೆ ಕೃಷಿ ವಿಶ್ವವಿದ್ಯಾಲಯ ಭೂಮಿ ಮಂಜೂರಾತಿ ಮಾಡಿಸಲು ವಿಶೇಷ ಪ್ರಯತ್ನ ಮಾಡಿದ ಆಗಿನ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿ ಸಾಗರ ತಾಲೂಕಿನ ಮಂಚಾಲೆಯ ಡಾ.ವಿಘ್ನೇಶ್ ಮುಖ್ಯ ಕಾರಣ.
ಸಾಗರ ತಾಲೂಕಿನ ಆನಂದಪುರಂ ನಾಡ ಕಚೇರಿಯ ಉಪ ತಹಸೀಲ್ದಾರ್ ಆಗಿದ್ದ ಕಲ್ಲಪ್ಪ ಮೆಣಸಿನ ಹಾಳ್ ಇರುವಕ್ಕಿಯ ರೆವಿನ್ಯೂ ಭೂಮಿ ಕೃಷಿ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲು ಹೆಚ್ಚು ಶ್ರಮಿಸಿದ್ದಾರೆ.
ಹೀಗೆ ಅನೇಕರ ಸಹಕಾರದಿಂದ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿಯ ಇರುವಕ್ಕಿಯಲ್ಲಿ ಪ್ರತಿಷ್ಟಿತ ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯ ಪ್ರಾರಂಭವಾಗಿದೆ.
ಯಡೇಹಳ್ಳಿ ಗ್ರಾಮ ಪಂಚಾಯತಿ ಸದಸ್ಯ – ಉಪಾಧ್ಯಕ್ಷ – ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ನಾನು ಶಂಕುಸ್ಥಾಪನೆಗೆ ಬಂದಿದ್ದ ಕೃಷಿ ಸಚಿವ ಕೃಷ್ಣ ಬೈರೇಗೌಡ ಮತ್ತು ಎಲ್ಲಾ ಅತಿಥಿಗಳಿಗೆ ಚಹಾ-ಮತ್ತು ಮಧ್ಯಾಹ್ನ ಮಲೆನಾಡಿನ ಶೈಲಿಯ ಊಟದ ಆತಿಥ್ಯ ನೀಡಿದ ಹಿರಿಮೆ ನನ್ನದು ಅದೇ ರೀತಿ ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪತ್ರಕರ್ತರು, ಗಣ್ಯರು ಮತ್ತು ಪೋಲಿಸ್ ಇಲಾಖಾ ಸಿಬ್ಬಂದಿಗಳಿಗೆ ನನ್ನ ಕೃಷ್ಣ ಸರಸ ಕಲ್ಯಾಣ ಮಂಟಪದಲ್ಲಿ ಮಲೆನಾಡಿನ ಸಂಪ್ರದಾಯಿಕ ಊಟ ಆಗಿನ ಕುಲಪತಿ ಚಿಂಡಿ ವಾಸುದೇವರ ಮನವಿ ಮೇರೆಗೆ ಉಣ ಬಡಿಸಿದ ಸಂತೃಪ್ತಿ ನನ್ನದು.
ಮುಂದಿನ ಪ್ರತಿ ವರ್ಷ ವಿಶ್ವವಿದ್ಯಾಲಯದ ಕುಲಾದಿಪತಿಗಳಾದ ರಾಜ್ಯಪಾಲರು ಘಟಿಕೋತ್ಸವಕ್ಕೆ ತಪ್ಪದೇ ಬರುತ್ತಾರೆ, ಈ ಭಾಗದ ಮುಂದಿನ ತಲೆಮಾರಿನ ಮಕ್ಕಳು ವಿದ್ಯಾವಂತರಾಗುವ ಹೊಸ ಹುಮ್ಮಸ್ಸು ಹೊಂದುತ್ತಾರೆ ಒಟ್ಟಾರೆ ಆನಂದಪುರಂ ಹೋಬಳಿ ಸರ್ವತ್ತೋಮುಖ ಅಭಿವೃದ್ದಿ ಕಾಣಲಿದೆ.
ದನ್ಯವಾದಗಳು ನನ್ನ ಲೇಖನ ಪ್ರಕಟಣೆಗಾಗಿ