ಪ್ರಾಣಿ ಪ್ರಿಯರ ನೆಚ್ಚಿನ ಸಿನಿಮಾ ಚಾರ್ಲಿ 777 ಸಿನಿಮಾ ಈಗಾಗಲೇ ಹೆಚ್ಚು ಜನಪ್ರಿಯತೆ ಗಳಿಸಿರುವ ಕನ್ನಡ ಸಿನಿಮಾವಾಗಿದೆ. ಈ ಸಿನಿಮಾ ದಲ್ಲಿ ಚಾರ್ಲಿ ಎಂಬ ಶ್ವಾನ ವನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ಚಿತ್ರವನ್ನು ಚಿತ್ರಿಸಲಾಗಿದೆ.
ಈ ಸಿನಿಮಾದಲ್ಲಿ ನಟಿಸಿರುವ 2 ಶ್ವಾನ ಗಳಿಗೆ ಸುಮಾರು 6ಕೋಟಿ ರೂಪಾಯಿ ಸಂದಾಯವಾಗಿದೆ. ಮತ್ತೊಂದು ವಿಶೇಷ ಎಂದರೆ ಆ ಹಣವನ್ನು ಗಾಯಗೊಂಡ ಪ್ರಾಣಿಗಳು ಮತ್ತು ಅನಾಥ ನಾಯಿಗಳ ರಕ್ಷಣೆಗೆ ಬಳಕೆಯಾಗಿದೆ.
ಚಿತ್ರದ ಪ್ರಚಾರದ ಸಂದರ್ಭದಲ್ಲಿ ಸಿನಿಮಾ ಯಶಸ್ವಿಯಾದಲ್ಲಿ ಅದರ ಲಾಭಾಂಶದ ಪಾಲನ್ನು ಈ ಶ್ವಾನ ಗಳಿಗೆ ಸಲ್ಲಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಚಿತ್ರ ತಂಡ ಹೇಳಿಕೊಂಡಿತ್ತು.
ಅದೇ ರೀತಿ ಚಾರ್ಲಿ 777 ಸಿನಿಮಾ ಭರ್ಜರಿ ಜಯ ಗಳಿಸಿ ಸುಮಾರು 160 ಕೋಟಿ ರೂಪಾಯಿ ಲಾಭ ಗಳಿಸಿದೆ. ಸಿನಿಮಾದಲ್ಲಿ ನಟಿಸಿರುವ ಮೈಸೂರಿನ 2 ಶ್ವಾನಗಳ ಪಾಲು ಸುಮಾರು 6 ಕೋಟಿ ರೂಪಾಯಿಗಳು ವಿತರಕರು ಮತ್ತು ಚಿತ್ರ ತಂಡದ ಮುಖಾಂತರ ಈ ಮೊತ್ತ ಚಾರ್ಲಿ ಗಳಿಗೆ ತಲುಪಲಿದೆ. ಈ ಹಣವನ್ನು ಇತರ ಶ್ವಾನಗಳ ಆರೈಕೆ ಗೆ ಬಳಸಿಕೊಳ್ಳಲಾಗುತ್ತದೆ ಎಂದು ಚಿತ್ರತಂಡ ಹಾಗೂ ತರಬೇತಿ ದಾರರು ನಿರ್ಧರಿಸಿದ್ದಾರೆ.
ಮಾಧ್ಯಮ ವೊಂದಕ್ಕೆ ಮಾಹಿತಿ ನೀಡಿರುವ ಚಾರ್ಲಿ ಮತ್ತು ಮತ್ತೊಂದು ಶ್ವಾನದ ತರಬೇತುದಾರ ರಾದ ಮೈಸೂರಿನ ಪ್ರಮೋದ್ ಅವರು ಈ ಹಣವನ್ನು ಠೇವಣಿ ಇಡಲಾಗುತ್ತದೆ. ಇದರಿಂದ ಬಂದ ಆದಾಯವನ್ನು ದೇಶಾದ್ಯಂತ ಗಾಯಗೊಂಡ ಪ್ರಾಣಿ,ಪಕ್ಷಿ, ಹಾಗೂ ಬೀದಿ ನಾಯಿಗಳ ಸಂರಕ್ಷಣೆಗೆ ಶ್ರಮಿಸುವ ಸಂಘ ಸಂಸ್ಥೆಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.