ಇಂಡೋನೇಷ್ಯಾದ ಈಸ್ಟ್ ಪಪುವಾ ಮತ್ತು ಆಸ್ಟ್ರೇಲಿಯಾದ ನ್ಯೂ ಗಿನಿಯಾ ಪ್ರಾಂತ್ಯಗಳಲ್ಲಿ ಭೂಕಂಪ ಸಂಭವಿಸಿದೆ.
ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 7.6 ರಷ್ಟು ದಾಖಲಾಗಿದ್ದು, ಭೂಕಂಪದ ನಂತರ ಅಮೆರಿಕದ ಜಿಯೊಲಾಜಿಕಲ್ ಸರ್ವೇ ಸಂಸ್ಥೆಯು ಸುನಾಮಿ ಎಚ್ಚರಿಕೆ ನೀಡಿದೆ.
ಕೈನಂಟು ಪಟ್ಟಣಕ್ಕೆ 67 ಕಿಲೋಮೀಟರ್ ದೂರದಲ್ಲಿ ಭೂಮಿಯ 61 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಸುತ್ತಲ 1,000 ಕಿಮೀ ವ್ಯಾಪ್ತಿಯಲ್ಲಿ ಸುನಾಮಿ ಅಪ್ಪಳಿಸಬಹುದು ಎಂದು ಜಿಯಾಲಾಜಿಕಲ್ ಸರ್ವೇ ಎಚ್ಚರಿಕೆ ನೀಡಿದೆ.