ಯುನೈಟೆಡ್ ಕಿಂಗ್ಡಮ್ನ ನೂತನ ಪ್ರಧಾನಿಯಾಗಿ ಬ್ರಿಟನ್ನ ಹಾಲಿ ವಿದೇಶಾಂಗ ಸಚಿವೆ ಲಿಜ್ಟ್ರಸ್ ಆಯ್ಕೆಯಾಗಿದ್ದಾರೆ.
ಈ ಮೂಲಕ ಕಳೆದ ಕೆಲ ವಾರಗಳಿಂದ ಮನೆಮಾಡಿದ್ದ ಕುತೂಹಲಕ್ಕೆ ಅಂತಿಮ ತೆರೆ ಬಿದ್ದಿದೆ. ಅಂದ್ಹಾಗೆ ಪ್ರಧಾನಿ ಹುದ್ದೆಯ ಪ್ರಬಲ ಸ್ಪರ್ಧಿಯಾಗಿದ್ದ ರಿಷಿ ಸುನಾಕ್ ಆರಂಭದಲ್ಲಿ ಭಾರಿ ಮುನ್ನಡೆ ಕಾದುಕೊಂಡಿದ್ದರು.
ಆದರೆ ಅಂತಿಮವಾಗಿ ಗೆಲುವು ಸಾಧಿಸೋಕೆ ವಿಫಲವಾಗಿದ್ದಾರೆ. ಒಟ್ಟು 81,326 ಮತಗಳನ್ನ ಪಡೆಯೋ ಮೂಲಕ ಲಿಜ್ಟ್ರಸ್ ಪ್ರಧಾನಿ ಹುದ್ದೆಯನ್ನ ಬಾಚಿಕೊಂಡಿದ್ದಾರೆ. ಇದೇ ಸಂಧರ್ಭದಲ್ಲಿ ಹಲವು ವಿವಾದಗಳು, ಅದಕ್ಕೆ ಸಮರ್ಥನೆಗಳು ಹೀಗೆ ಎಲ್ಲದರ ನಡುವೆಯೇ ಬರೋಬ್ಬರಿ 60,399 ಮತಗಳನ್ನ ಪಡೆಯೋ ಮೂಲಕ ರಿಷಿ ಸುನಾಕ್ ರೇಸ್ನಲ್ಲಿ ಸೆಕೆಂಡ್ ಪ್ಲೇಸ್ನಲ್ಲಿ ಉಳಿದುಕೊಂಡಿದ್ದಾರೆ.