ತೈವಾನ್‌ನಲ್ಲಿ ಒಪ್ಪಂದಗಳನ್ನು ಮಾಡಿಕೊಂಡು ಚೀನದ ಸಿಟ್ಟಿಗೆ ಕಾರಣವಾಗಿರುವ ಅಮೆರಿಕವು, ಚೀನವನ್ನು ಎದುರಿಸಲು ನಮಗೆ ಭಾರತ ಸೂಕ್ತ ಜತೆಗಾರ ಎನ್ನುವ ಮಾತನ್ನಾಡಿದೆ.
ವಾಷಿಂಗ್ಟನ್‌ನಲ್ಲಿ ಸೆಮಿನಾರ್ ಒಂದರಲ್ಲಿ ಭಾಗವ ಹಿಸಿದ್ದ ಅಮೆರಿಕ ನೌಕಾ ಪಡೆಯ ಮುಖ್ಯಸ್ಥ ಆಯಡಂ ಮೈಕ್ ಗಿಲ್ಡೇ ಅವರು ಈ ಮಾತನ್ನಾಡಿದ್ದಾರೆ.
ನಾನು ಪ್ರಪಂಚದ ಬೇರೆ ಎಲ್ಲ ರಾಷ್ಟ್ರಗಳ ಪ್ರವಾಸಕ್ಕಿಂತ ಹೆಚ್ಚು ಸಮಯವನ್ನು ಭಾರತ ಪ್ರವಾಸದಲ್ಲಿ ಕಳೆದಿದ್ದೇನೆ.
ಏಕೆಂದರೆ, ಚೀನವನ್ನು ಎದುರಿಸಲು ನಮಗೆ ಭಾರತ ಸೂಕ್ತ ವ್ಯೂಹಾತ್ಮಕ ಪಾಲುದಾರ ಎಂದು ಅವರು ಹೇಳಿದ್ದಾರೆ.
ಸದ್ಯ ಚೀನ ತೈವಾನ್‌ನತ್ತ ನೋಡಿಕೊಂಡು ಚಿಂತೆಗೆ ಸಿಲುಕಿದೆ. ಆದರೆ ಅದು ಭಾರತದ ಭಾಗವನ್ನೂ ನೋಡಬೇಕು ಎನ್ನುವ ಮೂಲಕ ಅವರು ಚೀನಾದ ಕಾಲೆಳೆದಿದ್ದಾರೆ.