ಅಂತಾರಾಷ್ಟ್ರೀಯ ಶ್ವಾನ ದಿನವನ್ನು ಪ್ರತಿ ವರ್ಷ ಆಗಸ್ಟ್ 26 ರಂದು ಆಚರಿಸಲಾಗುತ್ತದೆ.
ಆಗಸ್ಟ್ 26 ನೇ ದಿನಾಂಕವನ್ನು ಆಯ್ಕೆ ಮಾಡಲಾಗಿದೆ ಏಕೆಂದರೆ ಈ ದಿನಾಂಕದಂದು ಕೊಲೀನ್ ಅವರ ಕುಟುಂಬವು ಸ್ಥಳೀಯ ಪ್ರಾಣಿಗಳ ಆಶ್ರಯದಿಂದ ತನ್ನ ಮೊದಲ ನಾಯಿ “ಶೆಲ್ಟಿ” ಅನ್ನು ದತ್ತು ತೆಗೆದುಕೊಂಡಿತು. ಆ ಸಮಯದಲ್ಲಿ ಕೊಲೀನ್‌ಗೆ 10 ವರ್ಷ.
2004 ರಲ್ಲಿ, ಪೆಟ್ & ಫ್ಯಾಮಿಲಿ ಲೈಫ್ ಸ್ಟೈಲ್ ಎಕ್ಸ್‌ಪರ್ಟ್, ಅನಿಮಲ್ ರೆಸ್ಕ್ಯೂ ಅಡ್ವೊಕೇಟ್, ಕನ್ಸರ್ವಶನಿಸ್ಟ್ ಡಾಗ್ ಟ್ರೈನರ್ ಮತ್ತು ಲೇಖಕ ಕೊಲೀನ್ ಪೈಜ್ ಅವರು ಈ ದಿನವನ್ನು ಸ್ಥಾಪಿಸಿದರು. ಪ್ರಪಂಚದಾದ್ಯಂತ ಪ್ರಾಣಿಗಳ ಪ್ರಾಮುಖ್ಯತೆಯನ್ನು ಗಮನಕ್ಕೆ ತರಲು ಮತ್ತು ದತ್ತು ಪಡೆಯಲು ಪ್ರೋತ್ಸಾಹಿಸಲು ಅವರು ರಾಷ್ಟ್ರೀಯ ನಾಯಿಮರಿ ದಿನ, ರಾಷ್ಟ್ರೀಯ ಮಟ್ ಡೇ, ರಾಷ್ಟ್ರೀಯ ಬೆಕ್ಕು ದಿನ ಮುಂತಾದ ಹಲವಾರು ರಜಾದಿನಗಳ ಸಂಸ್ಥಾಪಕರಾಗಿದ್ದಾರೆ.
ಪ್ರತಿ ವರ್ಷ ರಕ್ಷಿಸಬೇಕಾದ ವಿವಿಧ ತಳಿಯ ನಾಯಿಗಳನ್ನು ಗುರುತಿಸಲು ಸಾರ್ವಜನಿಕರನ್ನು ಉತ್ತೇಜಿಸುವುದು ಅಂತರರಾಷ್ಟ್ರೀಯ ಶ್ವಾನ ದಿನದ ಮುಖ್ಯ ಉದ್ದೇಶವಾಗಿದೆ.
ಇನ್ನೂ ಹೆಚ್ಚಿನ ಸಂಖ್ಯೆಯ ಶ್ವಾನಗಳು ತಮ್ಮ ಮನೆಗಾಗಿ ಕಾಯುತ್ತಿವೆ ಜೊತೆಗೆ ತಮ್ಮ ಆಶ್ರಯವನ್ನು ಬಯಸುತ್ತಿವೆ ಎಂಬುದನ್ನು ನೆನಪಿಸಲು ಈ ದಿನವನ್ನು ರಚಿಸಲಾಗಿದೆ.
ಈಡೀ ಜಗತ್ತಿನಲ್ಲಿ ಬಹುಪಾಲು ಜನರು ಅಕ್ಕರೆಯಿಂದ ಪ್ರೀತಿಸುವ ಸಾಕು ಪ್ರಾಣಿಗಳಲ್ಲಿ ನಾಯಿ ಮೊದಲ ಸಾಲಿನಲ್ಲಿದೆ. ಇವು ಮಾನವನ ಅತ್ಯುತ್ತಮ ಸ್ನೇಹಿತ ಎಂದು ಕೂಡ ಕರೆಯಲಾಗುತ್ತದೆ. ನೀತಿ, ನಿಯತ್ತಿಗೆ ಇರುವ ಪ್ರಾಣಿ ಅಂದ್ರೆ ಅದು ಶ್ವಾನ ಮಾತ್ರ ಎಂಬುದು ಹಿಂದಿನ ಕಾಲದಿಂದ ಹಿಡಿದು ಚಾಲ್ತಿಯಲ್ಲಿರುವ ಹಿರಿಯರ ನಾಣ್ಣುಡಿ. ಇವೆಲ್ಲ ಕಾರಣಗಳಿಂದ ಇಂದಿನ ಯುವ ಪೀಳಿಗೆ ಕೂಡ ಶ್ವಾನ ಸಾಕಾಣಿಕೆಯಲ್ಲಿ ಅತೀವ ಆಸಕ್ತಿಯನ್ನು ಹೊಂದಿರುವುದನ್ನು ನಾವು ಇತ್ತೀಚಿನ ದಿನಗಳಲ್ಲಿ ಕಾಣುತ್ತೇವೆ.