Saturday, November 23, 2024
Saturday, November 23, 2024

ಮದ್ಯ ಮತ್ತು ಧೂಮಪಾನಿಗಳೇ ನಿಮಗೆ ಲೈಫ್ ರಿಸ್ಕ್ ಕಟ್ಟಿಟ್ಟ ಬುತ್ತಿ

Date:

ಮದ್ಯಪಾನ, ಧೂಮಪಾನ ಪ್ರಿಯರಿಗೆ ಇದು ಆಘಾತಕಾರಿ ಸುದ್ದಿ. ಅಧ್ಯಯನವೊಂದರಲ್ಲಿ ಕಂಡುಬಂದಿರುವ ಈ ಅಂಶಗಳು ಮದ್ಯ ಹಾಗೂ ಬೀಡಿ ಸಿಗರೇಟ್​ ಕೈಗೆತ್ತಿಕೊಳ್ಳುವ ಮುನ್ನ ಒಮ್ಮೆ ಯೋಚಿಸುವಂತೆ ಮಾಡಿದರೂ ಅಚ್ಚರಿ ಏನಲ್ಲ. ಇಂಥದ್ದೊಂದು ಆತಂಕಕಾರಿ ಅಂಶ ಈ ಜಾಗತಿಕ ಅಧ್ಯಯನಲ್ಲಿ ಕಂಡುಬಂದಿದೆ.

ಯುನಿವರ್ಸಿಟಿ ಆಫ್​ ವಾಷಿಂಗ್ಟನ್ಸ್​ ಸ್ಕೂಲ್​ ಆಫ್​ ಮೆಡಿಸಿನ್​ನ ಇನ್​ಸ್ಟಿಟ್ಯೂಟ್​ ಫಾರ್​​ ಹೆಲ್ತ್​ ಮೆಟ್ರಿಕ್ಸ್​ ಆಯಂಡ್ ಇವ್ಯಾಲ್ಯುವೇಷನ್​ ನಿರ್ದೇಶಕ ಡಾ. ಕ್ರಿಸ್ಟೋಫರ್ ಮುರ್ರೆ ಅವರು ಮಂಡಿಸಿದ ಅಧ್ಯಯನದಲ್ಲಿ ಈ ಆಘಾತಕಾರಿ ಅಂಶಗಳು ಕಂಡುಬಂದಿದೆ. ಇದನ್ನು ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ಪ್ರಕಟಿಸಿದೆ. ಈ ಅಧ್ಯಯನದಲ್ಲಿನ ಅಂಶಗಳು ಮದ್ಯ ಹಾಗೂ ಧೂಮಪಾನ ಪ್ರಿಯರಿಗೆ ಎಚ್ಚರಿಕೆ ಗಂಟೆಯಂತಿದೆ.

ಲ್ಯಾನ್ಸೆಟ್​​ನಲ್ಲಿ ಪ್ರಕಟಗೊಂಡಿರುವ ಗ್ಲೋಬಲ್​ ಬರ್ಡನ್​ ಆಫ್ ಡಿಸೀಸಸ್​, ಇಂಜುರೀಸ್ ಆಯಂಡ್ ರಿಸ್ಕ್​ ಫ್ಯಾಕ್ಟರ್ಸ್​ ರಿಪೋರ್ಟ್ 2019 ಎಂಬ ಶೀರ್ಷಿಕೆಯ ಅಧ್ಯಯನ ವರದಿಯಲ್ಲಿನ ಅಂಶಗಳು ಒಂದಷ್ಟು ಮಾಹಿತಿಯನ್ನು ಹೊರಹಾಕಿವೆ. ಇದರ ಪ್ರಕಾರ 2019ರಲ್ಲಿ ಭಾರತದಲ್ಲಿನ ಕ್ಯಾನ್ಸರ್​ ರೋಗಿಗಳಲ್ಲಿ ಸತ್ತವರ ಪೈಕಿ ಶೇ. 37 ರೋಗಿಗಳ ಸಾವಿಗೆ ಧೂಮಪಾನ, ಮದ್ಯಪಾನ ಮತ್ತು ಹೈ ಬಾಡಿ ಮಾಸ್​ ಇಂಡೆಕ್ಸ್​ ಕಾರಣ ಎಂಬುದು ಕಂಡುಬಂದಿದೆ. ಜಾಗತಿಕವಾಗಿ ಹೇಳುವುದಾದರೆ, ಕ್ಯಾನ್ಸರ್​​ನಿಂದ ಸತ್ತವರ ಪೈಕಿ ಶೇ. 44.4 ಸಾವಿಗೆ ಈ ರಿಸ್ಕ್​ ಫ್ಯಾಕ್ಟರ್​​ಗಳೇ ಕಾರಣ ಎಂದು ತಿಳಿದುಬಂದಿದೆ.

ಇದೇ ಅಧ್ಯಯನದ ಪ್ರಕಾರ, 2019ರಲ್ಲಿ ಜಗತ್ತಿನಲ್ಲಿ ಸಂಭವಿಸಿದ ಪುರುಷ ಕ್ಯಾನ್ಸರ್​ ರೋಗಿಗಳ ಸಾವಿನಲ್ಲಿ ಶೇ. 50.6ರಷ್ಟು ಸಾವು ಹಾಗೂ ಮಹಿಳಾ ಕ್ಯಾನ್ಸರ್​ ರೋಗಿಗಳಲ್ಲಿ ಶೇ. 36.3 ಸಾವು ಈ ರಿಸ್ಕ್ ಫ್ಯಾಕ್ಟರ್​ಗಳಿಂದ ಸಂಭವಿಸಿದೆ ಎಂಬುದು ಕಂಡುಬಂದಿದೆ. ಅಂದರೆ ಈ ಅವಧಿಯಲ್ಲಿನ ಕ್ಯಾನ್ಸರ್​ ರೋಗಿಗಳಲ್ಲಿ 2.88 ದಶಲಕ್ಷ ಪುರುಷರು ಮತ್ತು 1.58 ದಶಲಕ್ಷ ಮಹಿಳೆಯರ ಸಾವು ಧೂಮಪಾನ, ಮದ್ಯಪಾನ, ಅತಿಯಾದ ಬಿಎಂಐ ಮುಂತಾದ ರಿಸ್ಕ್​ ಫ್ಯಾಕ್ಟರ್​ಗಳಿಂದ ಸಂಭವಿಸಿದೆ ಎಂದು ಈ ಅಧ್ಯಯನ ಹೇಳಿದೆ.

ಈ ಅಧ್ಯಯನವು 23 ವಿವಿಧ ಕ್ಯಾನ್ಸರ್​ಗಳಲ್ಲಿ ಸಾವು ಅಥವಾ ಆರೋಗ್ಯ ಅತಿಯಾಗಿ ಹದಗೆಡುವಂಥದ್ದಕ್ಕೆ ಕಾರಣವಾಗುವ 34 ವಿಧದ ರಿಸ್ಕ್​ ಫ್ಯಾಕ್ಟರ್​ಗಳ ವಿಶ್ಲೇಷಣೆ ನಡೆಸಿದೆ. ಅವುಗಳ ಪೈಕಿ ಧೂಮಪಾನ, ಮದ್ಯಪಾನ ಮತ್ತು ಅತಿಯಾದ ಬಾಡಿ ಮಾಸ್ ಇಂಡೆಕ್ಸ್​ ಪುರುಷ ಹಾಗೂ ಮಹಿಳೆಯರಿಬ್ಬರಲ್ಲೂ ಸಾವು ಹಾಗೂ ಆರೋಗ್ಯ ಹದಗೆಡುವಲ್ಲಿ ಪ್ರಮುಖ ಕಾರಣವಾಗುತ್ತಿವೆ ಎಂದು ಡಾ.ಮುರ್ರೆ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...