Wednesday, November 27, 2024
Wednesday, November 27, 2024

ಕಸಬೊರಕೆಯಾಗಿಳೆಗೆ……

Date:

ನಮ್ಕಡೆ ಪೊರಕೆಗೆ ಹಿಡಿ ಅಂತ ಕರೀತೀವಿ.ಆದರೆ ಎಲ್ಲಾಕಡೆ ಅದನ್ನ ಪೊರಕೆ,ಕಸಬರಿಕೆ,ಕಸ್ಬರ್ಕೆ ಹೀಗೆ
ಕರೀತಾರೆ. ಪಾಪ ಮನೆಯನ್ನೆಲ್ಲಾ ಸ್ವಚ್ಛಮಾಡಿ ಕೊನೆಗೆ ಮೂಲೆ ಸೇರಿ ಕೂರತ್ತೆ. ಅದರ ಮಹತ್ವವೇ ಅಷ್ಟು.
ಈ ಕಸಪೊರಕೆ ಮಾಡಿದ ಜಾದು ನಿಮಗೆ ಗೊತ್ತಿಲ್ಲ ಅಂತಲ್ಲ.ಈಗ ಮಾಧ್ಯಮಗಳ ಮೂಲಕ ನೋಡಿರ್ತೀರಿ,ಕೇಳಿರ್ತೀರಿ.

ಬಹಳ ಸಾಮಾನ್ಯ ರೂಪದ,ಅದರಲ್ಲೂ ಸುಂದರವೇ ಅಲ್ಲದ ಅಸ್ತಿತ್ವ ಇದರದ್ದು. ವೆರಿ ಬ್ಯೂಟಿಫುಲ್, ವೆರಿ ಹ್ಯಾಂಡ್ ಸಮ್
ಅಂತ ಹೇಳೋಕೂ ಬರಲ್ಲ. ಯಾಕಂದ್ರೆ ಅದಕ್ಕೆ ಲಿಂಗಭೇದವೇ ಇಲ್ಲ.ಜಾತ್ಯಾತೀತವೂ ಹೌದು.
ಯಾರೇ ಕೈಯಲ್ಲಿ ಹಿಡಿದ್ರೂ ಮಾಡೋ ಘನಂದಾರಿ ಕೆಲಸ ಒಂದೇ.

ಈ ಪೊರಕೆ ಇದೂವರೆಗೆ ಮೂಲೇಲೇ ಇರ್ತಿತ್ತು. ಅದಕ್ಕೆ ಅಂಗಡೀಲಿ ಕೊಳ್ಳೋ ಬೆಲೆ ಇತ್ತಷ್ಟೆ. ಈಗ ಅದೇನು‌
ಮ್ಯಾಜಿಕ್ಕೋ ರಾಜಕೀಯರಂಗಕ್ಕೂ ಪ್ರವೇಶಮಾಡಿದೆ. ರಾಜಕೀಯ ಪಕ್ಷದ ಚಿನ್ಹೆಯಾಗಿ ರಾರಾಜಿಸುತ್ತಿದೆ.
ದೆಹಲಿ ಕೇದ್ರಾಡಳಿತ ಪ್ರದೇಶದಲ್ಲಿ ಈಗ ಅದರ ಗುರುತಿನ ಬಲದಿಂದ ಆಮ್ ಆದ್ಮಿ ಪಾರ್ಟಿ ಆಡಳಿತ ಸಿಂಹಾಸನದಲ್ಲಿದೆ. ಅಲ್ಲಿಂದ ಅದರ
ಸ್ವಚ್ಛತಾ ಕೆಲಸ ಶುರುವಾಯಿತು ನೋಡಿ!. ಈಗ ಪಕ್ಕದ ಪಂಜಾಬ್ ರಾಜ್ಯಕ್ಕೂ ಕಸಗುಡಿಸಲು ಪುಟುಪುಟು ಓಡಿಬಿಟ್ಟಿದೆ.

ನಿಜ ..ರಾಜಕೀಯ ಬಹಳ ಹೊಲಸಾಗಿದೆ ಅಂತ ಬಹಳ ರಾಜಕಾರಣಿಗಳು ತಮ್ಮ ಭಾಷಣದಲ್ಲಿ ಹೇಳ್ತಿರ್ತಾರೆ.ಅದಕ್ಕೆ ಸರಿಯಾಗಿ ಈ ಪೊರಕೆ ತನ್ನ ಡ್ಯೂಟಿ
ಆರಂಭಿಸಿಬಿಟ್ಟಿದೆ. ಎಂತೆಂಥವರು ಈ ಪೊರಕೆ ಮಹಿಮೆಯಲ್ಲಿ ಗೆದ್ದರು ಅಂದ್ರೆ ನಂಬಲಿಕ್ಕೇ ಆಗಲ್ಲ. ಬಹಳ ಅನುಭವಿಗಳು, ಹಣವಂತರು, ಮಹಾ ಬುದ್ಧಿವಂತರು ಮಾತ್ರ ರಾಜಕೀಯಮಾಡಬಹುದು ಅಂತ ಬಹಳ ಮಂದಿ ಮಾತಾಡಿಕೊಳ್ತಾರೆ.
ಆದರೆ ಈ ಪೊರಕೆ ಅದನ್ನೆಲ್ಲ ಸುಳ್ಳು ಮಾಡಿಬಿಟ್ಟಿದೆ.

ಇತ್ತಿಚೆಗೆ ನಡೆದ ಪಂಜಾಬಿನ ವಿಧಾನ ಸಭಾ ಚುನಾವಣೆಯಲ್ಲಿ ಚಮತ್ಕಾರವನ್ನೇ ಮಾಡಿಬಿಟ್ಟಿತು.
ಹಾಲಿ ಮುಖ್ಯಮಂತ್ರಿಗಳು ಮೂವತ್ತೇಳು ಸಾವಿರ ಮತಗಳ ಅಂತರದಲ್ಲಿ ಸೋಲಪ್ಪುವಂತೆ ಮಾಡಿದೆ.
ಸಾಮಾನ್ಯ ಓರ್ವ ಅಂಗಡಿಯವ ಅದರಲ್ಲೂ ಒಂದು ಮೊಬೈಲ್ ಷಾಪಿನ ಓನರ್ರು ಗೆದ್ದು ಎಮ್ಮಲ್ಯೆ ಆಗಿ ಬಿಗುವಂತಾಗಿದೆ. ಅಂದ್ರೆ
ಆಪ್ ಮುಖ್ಯಸ್ಥ ಕೇಜ್ರಿವಾಲ್ ಹೇಳುವಂತೆ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲೂ ಗೆಲ್ಲುವ ಸಾಮರ್ಥ್ಯ ಇದೆ. ಈ ಸಂಗತಿಯನ್ನು ಪಂಜಾಬಿನ ಚುನಾವಣೆ ತಿಳಿಸಿದೆ.
ಆ ವ್ಯಕ್ತಿಯ ಹೆಸರು ಲಾಭ್ ಸಿಂಗ್ ಉಗೋಕೆ.ಈತ ಹಳ್ಳಿಯೊಂದರಲ್ಲಿ ಮೊಬೈಲ್ ಷಾಪ್ ನಡೆಸ್ತಾರೆ.

ನಿಮಗೆ ಅಚ್ಚರಿಯಾಗಬಹುದು. ಚರನ್ಜಿತ್ ಸಿಂಗ್ ಚನ್ನಿ ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು.ಒಂದು ಬಹಾದೂರ್ ಮತ್ತೊಂದು ಚಮಕೌರ್ ಸಾಹಿಬ್. ಅಲ್ಲೂಕೂಡ ಆಮ್ ಆದ್ಮಿ ಅಭ್ಯರ್ಥಿ ಎದುರೇ ಸೋತಿದ್ದಾರೆ.

ಗೆದ್ದ ಅಭ್ಯರ್ಥಿಯ ಹೆಸರೂ ಚರನ್ ಜಿತ್ ಸಿಂಗ್. ಈ ಚರನ್ ಜಿತ್ ಸಿಂಗ್ ಕಣ್ಣಿನ ವೈದ್ಯರು. ಸಮಾಜ ಸೇವಕರು. ಹಿಂದಿನ ಚುನಾವಣೆಯಲ್ಲಿ ಸೋತಿದ್ದರು. ಪೊರಕೆ ಎರಡೂ ಕಡೆ ಸ್ವಚ್ಛಗೊಳಿಸಿಬಿಟ್ಟಿದೆ.

ಸೋತ ಮುಖ್ಯಮಂತ್ರಿ ಕಡಿಮೆ ಆಸಾಮಿಯೇನಲ್ಲ.ಯಾಕಂದ್ರೆ ಅಧಿಕಾರದಲ್ಲಿ ಇದ್ದವ್ರು.ಆದರೆ ಪೊರಕೆ ಬಿಡಲಿಲ್ಲ. ಕಸ ಗುಡಿಸೋ
ಹಾಗೆ ಅಲ್ಲಿನ ರಾಜಕೀಯದ ಮಲ್ಲಾದಿಮಲ್ಲರನ್ನ ಗುಡಿಸಿ ಗುಪ್ಪೆ ಹಾಕಿಬಿಟ್ಟಿತು.ನವಜೋತ್ ಸಿಂಗ್ ಸಿಧು, ಕ್ಯಾ .ಅಮರಿಂದರ್ ಸಿಂಗ್,
ಹೀಗೆ ಖ್ಯಾತನಾಮರನ್ನ ಪೊರಕೆ ಮಕಾಡೆ ಮಾಡಿದೆ.

ಪೊರಕೆಯನ್ನ ರೂಪಕವಾಗಿ ನೋಡೋದಾದ್ರೆ ಅದು ಬಹಳ
ಕರಾರುವಾಕ್ಕಾದ ಕೆಲಸಮಾಡಿದೆ ಅನ್ನಬಹುದು. ಆಡಳಿತದಲ್ಲಿ ಈಗಾಗಲೇ ವಿವಿಧ ಕಸ ತುಂಬಿದೆ. ಆ ಕಸಗಳೆಂದರೆ ಭ್ರಷ್ಟಾಚಾರ , ಸೋಂಬೇರಿತನ, ಸ್ವಜನಪಕ್ಷಪಾತ ಇತ್ಯಾದಿ …ಇತ್ಯಾದಿ. ಅವನ್ನೆಲ್ಲಾ ಗುಡಿಸಿ ಸ್ವಚ್ಛವಾದ ಆಡಳಿತ ಕೊಡೋದೇ ಗುರಿ. ಜನ ಕೂಡ ಸ್ವಚ್ಛ ಪರಿಸರದಲ್ಲಿ ಉಸಿರಾಡಬಹುದು.
ಅಧಿಕಾರ ಅನ್ನೋದು ಕಸಪೊರಕೆ ಹಾಗಿರಬೇಕು. ಗುಡಿಸಿದ ಮೇಲೆ ಅದರ ಜಾಗ ಮೂಲೇನೇ..!
ಅದನ್ನ ತಲೆ ಮೇಲೆ ಹೊತ್ತರೆ ಜನ ನಗಾಡಿ ಕೊಳ್ತಾರೆ.

ಪೊರಕೆ ಒಂದು ಗುಟ್ಟಿನ ಮಾತನ್ನ ಹೇಳತ್ತೆ. ಇದನ್ನ ಬ್ರಹ್ಮಾಂಡ ಗುರೂಜಿ ಅಂಥವರೂ ಹೇಳೋಕಾಗಲ್ಲ. ಮೊದಲು ದೆಹಲಿ,ಈಗ ಪಂಜಾಬ್ ಆಮೇಲೆ ಹರಿಯಾನ…ಇನ್ನು ಹೀಗೇ ಉತ್ತರದಲ್ಲಿ ಅಭಿಯಾನ ಶುರು. ದಕ್ಷಿಣಕ್ಕೆ ಬರುವ ಕಾಲವೂ ದೂರವಿಲ್ಲ. ಬಿಜೇಪಿ ಮೇಲೆ ಕಾಂಗ್ರೆಸ್,ಕಾಂಗ್ರೆಸ್ ಮೇಲೆ ಬಿಜೇಪಿ
ಇವರೆಡರ ಮೇಲೆ ಟಿಎಂಸಿ. ಮತ್ತೆ ಕಿಂಗ್ ಮೇಕರ್ ಅಗಿ ಸುಳಿದಾಡುವ ಜೆಡಿಎಸ್…ಚೆನೈ ,ಆಂಧ್ರ , ತೆಲಂಗಾಣ ಈ ಕಡೆ ಏನೇನು ವರಸೆ ಹಾಕುತ್ತೋ ಗೊತ್ತಿಲ್ಲ. ಹೀಗೆ ಇವೆಲ್ಲವನ್ನೂ ಈ ಪೊರಕೆ ಕಾಲಕಸ ಮಾಡಿಬಿಡುತ್ತೋ ಏನೋ ಆ ಪರಶಿವನೇ ಬಲ್ಲ.!.

ದಾರ್ಶನಿಕ ಡಿವಿಜಿ ಅವರು ಹಿಂದೆಯೇ ಕಸಪೊರಕೆಯ ಮಹತ್ವ ಮತ್ತು ಅದರ ಯಕಃಶ್ಚಿತ್ ಸೇವೆಯಾದರೂ ಪಾರಮ್ಯದ ಬಗ್ಗೆ
ಹೇಳಿದ್ದಾರೆ.ನೆನಪು ಮಾಡಿಕೊಳ್ಳುವುದು ಈಗ ಬಹಳ ಸೂಕ್ತ.

ಹೆಸರು ಹೆಸರೆಂಬುದೇಂ? ಕಸರು ಬೀಸುವ ಗಾಳಿ ।
ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ ? ।।
ಶಿಶುವಾಗು ನೀಂ ಮನದಿ, ಹಸುವಾಗು, ಸಸಿಯಾಗು ।
ಕಸಬೊರಕೆಯಾಗಿಳೆಗೆ – ಮಂಕುತಿಮ್ಮ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

1 COMMENT

  1. ಸಕಾಲಿಕ ಬರಹ. ತುಂಬಾ ಮಾರ್ಮಿಕವಾಗಿ ಮೂಡಿಬಂದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Constitution Day ಸಂವಿಧಾನ ಪೀಠಿಕೆಯನ್ನು ಪ್ರತಿಷ್ಠಾಪಿಸುವ ಕೆಲಸವನ್ನ ರಾಜ್ಯ ಸರ್ಕಾರ ಮಾಡುತ್ತಿದೆ- ಮಧು ಬಂಗಾರಪ್ಪ

Constitution Day ಭಾರತೀಯರೆಲ್ಲರೂ ಒಂದೇ ಎಂಬ ಐಕ್ಯತೆ, ಸಮಗ್ರತೆ, ಭಾವೈಕ್ಯತೆ...

K.H. Muniyappa ನ.28ರೊಳಗೆ ಎಲ್ಲಾ ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ವಿತರಿಸಲು ಅಧಿಕಾರಿಗಳಿಗೆ ಸೂಚನೆ- ಸಚಿವ ಕೆ ಎಚ್. ಮುನಿಯಪ್ಪ

K.H. Muniyappa ಎಲ್ಲಾ ಪಡಿತರ ಕಾರ್ಡ್‌ಗಳನ್ನು ಯಥಾವತ್ತಾಗಿ ಮುಂದುವರಿಸಲು ಮುಖ್ಯಮಂತ್ರಿಗಳ ಆದೇಶದಂತೆ...