ಹಿಂದೂ, ಮುಸ್ಲಿಂ, ಸಿಖ್ ಅಥವಾ ಯಾರೇ ಆಗಿರಲಿ ಕೇವಲ ರಾಜಕೀಯಕ್ಕಾಗಿ ಜನರನ್ನು ವಿಭಜಿಸುವವರ ಬದಲು ಎಲ್ಲರನ್ನೂ ಒಳಗೊಳ್ಳುವ ದಿಟ್ಟ ಪ್ರಧಾನಮಂತ್ರಿ ಭಾರತಕ್ಕೆ ಅಗತ್ಯವಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಅವರ ಜೀವನ ಚರಿತ್ರೆ “ಫರೋಸ್ ಇನ್ ಎ ಫೀಲ್ಡ್ ದ ಅನ್ ಎಕ್ಸ್ ಪ್ಲೋರ್ಡ್ ಲೈಫ್ ಆಫ್ ಎಚ್.ಡಿ. ದೇವೇಗೌಡ ” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಜನರು ಬಲಿಷ್ಠರಾದ ಮಾತ್ರ ದೇಶವು ಬಲಿಷ್ಠವಾಗುತ್ತದೆ. ಭಾರತಕ್ಕೆ ಒಬ್ಬ ದಿಟ್ಟ ಪ್ರಧಾನಮಂತ್ರಿ ಬೇಕು. ಎಲ್ಲರನ್ನೂ ಒಟ್ಟಿಗೆ ಹಿಡಿದುಕೊಳ್ಳುವ ಪ್ರಧಾನಿಯೂ ರಾಜಕೀಯಕ್ಕಾಗಿ ಭಾರತ, ಹಿಂದೂ, ಮುಸ್ಲಿಂ, ಸಿಖ್ ಹೀಗೆ ಯಾರನ್ನು ವಿಭಜಿಸುವುದು ಇಲ್ಲ. ಭಾರತಕ್ಕೆ ವಿಭಜನೆಯ ಅಗತ್ಯವಿಲ್ಲ ಎಂದರು.
ಪ್ರತಿ ಚುನಾವಣೆಯು ಭಾರತ ಹಾಗೂ ಭಾರತದ ಜನರನ್ನು ವಿಭಜಿಸುತ್ತದೆ. ನಾವು ಧರ್ಮದ ಆಧಾರದಿಂದ ವಿಭಜನೆಯಾದ ದಿನ ಯಾವಾಗ ಬರುತ್ತದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ನಾನು ಮುಸ್ಲಿಂ, ನನ್ನ ಧರ್ಮದಂತೆ ಇತರ ಎಲ್ಲಾ ಧರ್ಮಗಳ ಬಗ್ಗೆ ಗೌರವವನ್ನು ಹೊಂದಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡ್ರು, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡರಾದ ಜೈರಾಮ್ ರಮೇಶ್ ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.