ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನ 8 ತಾಣಗಳಲ್ಲಿ ಒಟ್ಟು 175 ಪ್ರಭೇದದ ಚಿಟ್ಟೆಗಳನ್ನು ಮಂಗಳೂರು ವಿಶ್ವವಿದ್ಯಾಲಯದ ತಂಡ ಗುರುತಿಸಿದೆ. ಇದರೊಂದಿಗೆ ಅವುಗಳ ಬಗ್ಗೆ ಮಾಹಿತಿ ದಾಖಲಿಸಿದೆ.
ಎರಡು ವರ್ಷಗಳ ಸಮೀಕ್ಷೆಯ ಆಧಾರದ ಮೇಲೆ ಸಂಶೋಧಕರು ಪಶ್ಚಿಮ ಘಟ್ಟಗಳಲ್ಲಿ ಚಿಟ್ಟೆಗಳ ಯಥೇಚ್ಛ ವಿನ್ಯಾಸಗಳು ಮತ್ತು ಅವುಗಳು ಇಷ್ಟಪಡುವ ಆವಾಸಸ್ಥಾನಗಳ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.
ಅತ್ಯಂತ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟಗಳಲ್ಲಿ ಚಿಟ್ಟೆಗಳ ಭವಿಷ್ಯದ ಪರಿವೀಕ್ಷಣೆ ಮತ್ತು ಸಂರಕ್ಷಣಾ ಕಾರ್ಯ ಗಳಿಗೆ ಅಗತ್ಯವಿರುವ ಬೃಹತ್ ಪ್ರಮಾಣದ ಮೂಲ ದತ್ತಾಂಶಗಳನ್ನು ಸಂಗ್ರಹಿಸಿದ್ದಾರೆ.
ಚಿಟ್ಟೆಗಳ ಆವಾಸಸ್ಥಾನ,ಅವುಗಳ ಆಹಾರ ಸಸ್ಯಗಳು, ಚಿಟ್ಟೆಗಳು ಕಾಣಸಿಗುವ ವಾತಾವರಣದ ಬಗ್ಗೆ ಮಾಹಿತಿಯನ್ನು ದಾಖಲಿಸಲಾಗಿದೆ. ಆಹಾರ ಸಸ್ಯಗಳನ್ನು ಬೆಳೆಸುವ ಮೂಲಕ ಚಿಟ್ಟೆಗಳ ಆವಾಸಸ್ಥಾನ ಸೃಷ್ಟಿಸಲು ಹಾಗೂ ಚಿಟ್ಟೆಗಳ ಸಂರಕ್ಷಣೆಗೆ ಅಧ್ಯಯನ ಸಹಕಾರಿಯಾಗಲಿದೆ ಎಂದು ಡಾ. ಮುಸ್ತಾಕ್ ಅವರು ತಿಳಿಸಿದ್ದಾರೆ.
ಯೇನೆಪೊಯ ವಿಶ್ವವಿದ್ಯಾಲಯದ ಸಂಶೋಧಕ ಡಾ.ಆರ್. ಶ್ಯಾಮ ಪ್ರಸಾದ್ ರಾವ್ ಮತ್ತು ಬೆಂಗಳೂರಿನ ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ದೀಪಕ್ ನಾಯ್ಕ ಮತ್ತು ಡಾ.ಎಂ.ಎಸ್.ಮುಸ್ತಾಕ್ ಈ ಅಧ್ಯಯನವನ್ನು ನಡೆಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.