ನವೆಂಬರ್ 5 ರಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರು ಪ್ರಸಿದ್ಧ ಯಾತ್ರಾಸ್ಥಳ ಕೇದಾರನಾಥ್ ಗೆ ಭೇಟಿ ನೀಡಿದರು. ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣ ಮಾಡುವ ಕಾರ್ಯಕ್ರಮಕ್ಕೆ ಆಗಮಿಸಿದರು. 2016ರಲ್ಲಿ ಬಂದ ಹಿಮ ಪ್ರವಾಹದ ಪರಿಣಾಮವಾಗಿ ಶಂಕರಾಚಾರ್ಯರ ಸಮಾಧಿ ಅಸ್ತವ್ಯಸ್ತವಾಗಿತ್ತು. ಮತ್ತೆ ಅದರ ಪುನರ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನ ಮೈಸೂರಿನ ಶಿಲ್ಪಿ ಅವರು ತಮ್ಮ ಕರಕುಶಲತೆಯಿಂದ ನಿರ್ಮಿಸಿದ್ದಾರೆ. 12 ಅಡಿ ಎತ್ತರ ಇರುವ ಶಂಕರಾಚಾರ್ಯರ ಮೂರ್ತಿಯನ್ನು ಬಹುಸುಂದರವಾಗಿ ನಿರ್ಮಿಸಲಾಗಿದೆ. ಅವರ ಶಿಲ್ಪ ಕಲಾ ನೈಪುಣ್ಯಕ್ಕೆ ಗೌರವಿಸಿ ಕೇಂದ್ರ ಸರ್ಕಾರ ಅವರನ್ನು ಪರೀಕ್ಷಾರ್ಥವಾಗಿ ಆಚಾರ್ಯರ ಮಾದರಿ ಮೂರ್ತಿಯನ್ನು ಕೆತ್ತನೆ ಮಾಡಲು ಕೇಳಲಾಗಿತ್ತು. ಮೋದಿ ಅವರೇ ಈ ಕೆತ್ತನೆಗೆ ಮನಸೋತು ಕೆಲಸ ಆರಂಭಿಸಲು ಸೂಚಿಸಿದರು. ಶಂಕರಾಚಾರ್ಯರ ಮೂರ್ತಿಯನ್ನು ಕೃಷ್ಣ ಶಿಲೆಯಲ್ಲಿ ನಿರ್ಮಿಸಲಾಗಿದೆ.
ಪ್ರಧಾನಿ ಮೋದಿ ಜಿ ಅವರು ಕೇದಾರೇಶ್ವರನಿಗೆ ಅರ್ಚನೆಯ ಮಾಡಿ ಪೂಜೆ ಸಲ್ಲಿಸಿದರು. ಕನ್ನಡಿಗ ಅರ್ಚಕರಾದ ಶ್ರೀ ವಾಗೀಶ ಲಿಂಗ ಅವರು ರುದ್ರಾಕ್ಷಿ ಹಾರವನ್ನು ಪ್ರಧಾನಿಯವರ ಕೊರಳಿಗೆ ತೊಡಿಸಿ ಸ್ವಾಗತಿಸಿದರು. ನಂತರ ಪ್ರಧಾನಿಯವರು ಕೇದಾರೇಶ್ವರನಿಗೆ ಆರತಿ ಬೆಳಗಿದರು. ಭಕ್ತಿಪರವಶರಾಗಿ ಆದಿಶಂಕರಾಚಾರ್ಯರ ಪ್ರತಿಮೆ ಮುಂದೆ ಧ್ಯಾನಸ್ಥರಾಗಿ ಕುಳಿತಿದ್ದರು. ತಮ್ಮ ಭಾಷಣದಲ್ಲಿ ಹಿಂದೂ ಧರ್ಮಕ್ಕೆ ಆದಿಶಂಕರರ ಕೊಡುಗೆ ಅಪಾರ ಎಂದು ಸ್ಮರಿಸಿದರು.