ಈಗ ಪುನೀತ್ ರಾಜ್ ಕುಮಾರ್
ಕೈಗೊಂಡ ಸಾಮಾಜಿಕ ಸೇವೆಗಳು
ಎಲ್ಲರ ಗಮನಕ್ಕೆ ಬಂದಿವೆ.
26 ಅನಾಥಾಶ್ರಮಗಳು, 45 ಉಚಿತ ಶಾಲೆ, 16 ವೃದ್ಧಾಶ್ರಮ, 19 ಗೋಶಾಲೆ, 1800 ಮಕ್ಕಳ ಸಂಪೂರ್ಣ ಶಿಕ್ಷಣ . ಹೆತ್ತವರಾದ ಕರ್ನಾಟಕ ರತ್ನ ಡಾ.ರಾಜ್ ಮತ್ತು ಪಾರ್ವತಮ್ಮನವರು ಸ್ಥಾಪಿಸಿದ ಮೈಸೂರಿನ” ಶಕ್ತಿ ಧಾಮ “ದಲ್ಲಿ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆಯನ್ನು ಮಾಡಿದ್ದಾರೆ.
ಜೀವಮಾನದಲ್ಲಿ ಒಬ್ಬ ಮನುಷ್ಯ ಮಾಡಬಹುದಾದ ಕೊಡುಗೆಕಿಂತ
ಇವು ಹೆಚ್ಚಾಗಿಯೇ ಇವೆ.ಅವರ
‘ ರಾಜಕುಮಾರ’ ಸಿನಿಮಾ ಮಹತ್ವದ್ದು.ವೃದ್ದಾಪ್ಯದಲ್ಲಿ ಹೆತ್ತವರನ್ನ ವೃದ್ಧಾಶ್ರಮಕ್ಕೆ ತಳ್ಳುವ ಇಂದಿನ
ಪೀಳಿಗೆಗೆ ಕಣ್ತೆರೆಸುವ ಸಂದೇಶವಿದೆ.
ಅವರು ಹಿನ್ನೆಲೆಗಾಯನದಿಂದ ಬಂದ
ಹಣವನ್ನ ವೃದ್ಧಾಶ್ರಮಕ್ಕೇ ನೀಡುತ್ತಿದ್ದರಂತೆ. ಇನ್ನು ಜಾಹೀರಾತುಗಳಿಗೆ ಮಾಡೆಲ್ ಆಗಿ
ಸಂಪಾದಿಸಿದ ಹಣವೂ ಕೂಡ ಸಮಾಜ ಸೇವೆಗೇ ಮೀಸಲಾಗಿತ್ತು.
ಕೆಲವು ಸಾಮಾಜಿಕ ಬದ್ಧತೆಯುಳ್ಳ
ಸಂದೇಶಗಳಿಗೆ ರಾಯಭಾರಿಗಳಾಗಿದ್ದರು. ಅವುಗಳಿಂದ ಗೌರವಧನವನ್ನೇ ಸ್ವೀಕರಿಸುತ್ತಿರಲಿಲ್ಲ. ಸಮಾಜ ಸೇವೆ ಎಂದರೆ ಸ್ವೀಕರಿಸುವ ಹಣದಲ್ಲಿ
ಶೇಕಡಾವಾರು ಮೀಸಲಲ್ಲ.ಅಷ್ಡೂ ಇಡುಗಂಟನ್ನ ಆಯಾ ಸೇವೆಗೇ ಕೊಟ್ಟುಬಿಡುತ್ತಿದ್ದ ಧಾರಾಳಿ ಈ ‘ದೊಡ್ಮನೆ ಹುಡುಗ’.
ಇಪ್ಪತ್ತಾರು ಅನಾಥಾಶ್ರಮಗಳು.
ನಿಜಕ್ಕೂ ಅಲ್ಲಿನ ಮಕ್ಕಳು ಯುವರತ್ನನಿಗೆ ಸ್ವರ್ಗ ಸಿಗಲೆಂದೇ
ಮನಪೂರ್ತಿ ಹರಸುತ್ತಾರೆ.
ನಾಲ್ವತೈದು ಉಚಿತ ಶಾಲೆಗಳಲ್ಲಿ
ವಿದ್ಯಾದಾನ ಮಾಡಿದ ಪುಣ್ಯ ಪುನೀತನಿಗೆ. ಹತ್ತೊಂಬತ್ತು ಗೋಶಾಲೆಗಳು.ಅಲ್ಲಿನ ಮೂಕ ಗೋಮಾತೆ ಕೂಡ ಪುನೀತನಿಗೆ
ಪುಣ್ಯತುಂಬಿ ಹರಸುತ್ತಿವೆ.
ಸಾವಿರದ ಎಂಟುನೂರು ಮಕ್ಕಳಿರುವ ” ಶಕ್ತಿಧಾಮ”.ಅದರ ಹೊಣೆಯನ್ನ ಮಿತ್ರ ನಟ ವಿಶಾಲ್
ವಹಿಸಿಕೊಂಡಿದ್ದಾರೆ.
ಹಿರಿಯರು ಹೇಳುವ ಮಾತಿದೆ
ಈ ಜಗತ್ತಿಗೆ ಬರುವಾಗ ನಾವು
ಅಳುತ್ತಿರುತ್ತೇವೆ. ಪೋಷಕರು ಆನಂದದಿಂದ ನಗುತ್ತಿರುತ್ತಾರೆ.
ಆದರೆ ಜಗತ್ತನ್ನ ಬಿಟ್ಟು ಹೋಗುವಾಗ
,ನಗುತ್ತಾ ಹೋಗ ಬೇಕಂತೆ.ಆಗ ಸಮಾಜ ಅಳುತ್ತಿರುವುದಂತೆ.
ಹಾಗೆ ಅಪ್ಪು ನಗುತ್ತಲೇ ಹೋಗಿದ್ದಾರೆ.
ನಾವು ಅಗಲಿಕೆಯ ದುಃಖದಲ್ಲಿ
ಮುಳುಗಿದ್ದೇವೆ.
ಇಂತಹ ವ್ಯಕ್ತಿಗೆ ಬಸವಶ್ರೀ ಪ್ರಶಸ್ತಿ
ಅರಸಿ ಬಂದಿದೆ. ಸಾಮಾಜಿಕ ಕಳಕಳಿಯುಳ್ಳ ಮನುಷ್ಯರಿಗೆ ನೀಡುವ ಈ ಪುರಸ್ಕಾರಕ್ಕೆ ಬೆಲೆಬಾಳುವಂಥ ವ್ಯಕ್ತಿಯೇ ಆಯ್ಕೆಯಾಗಿದ್ದಾರೆ. ಪ್ರಶಸ್ತಿಗೂ ಮೌಲ್ಯ ಹೆಚ್ಚಿದೆ.