ಅಮೆರಿಕ ಮೂಲದ ‘ಮೆರ್ಕ ಅಂಡ್ ರಿಡ್ಜ್ ಬ್ಯಾಕ್ ಬಯೋಥೆರಪ್ಯೂಟಿಕ್’ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಡ್-19 ನಿರೋಧಕ ಮಾತ್ರೆ ‘ಮೊಲ್ನುಪಿರಾವಿರ್’ ಬಳಕೆಗೆ ಬ್ರಿಟನ್ ಅನುಮೋದನೆ ನೀಡಿದೆ.
ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಯುರೋಪಿನಾದ್ಯಂತ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯು ದಾಖಲೆಯ ಮಟ್ಟವನ್ನು ಮುಟ್ಟುತ್ತಿವೆ. ಈ ಹಿನ್ನೆಲೆಯಲ್ಲಿ ಹೊಸ ಅಲೆಯು ತೀವ್ರ ಕಳವಳಕಾರಿಯಾದದ್ದು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ.
ಯುರೋಪಿನ 53 ದೇಶಗಳಲ್ಲಿ ಪ್ರಸ್ತುತ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಡೆಲ್ಟಾ ರೂಪಾಂತರಿ ವೈರಾಣುಗಳು ವೇಗವಾಗಿ ಹಬ್ಬುತ್ತಿರುವುದರಿಂದ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಹ್ಯಾನ್ಸ್ ಕ್ಲೂಗೆ ಹೇಳಿದ್ದಾರೆ.
ಚಳಿಗಾಲ ಆರಂಭವಾಗಿರುವ ಕಾರಣ, ಜನರು ಮನೆಯೊಳಗೆ ಉಳಿಯುತ್ತಿರುವುದು ಕೂಡ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಯುರೋಪಿನಲ್ಲಿ ಇದೇ ರೀತಿಯ ಪರಿಸ್ಥಿತಿ ಮುಂದುವರಿದಲ್ಲಿ ಫೆಬ್ರುವರಿ ಹೊತ್ತಿಗೆ ಐದು ಲಕ್ಷ ಜನರು ಸಾವಿಗೀಡಾಗುವ ಸಾಧ್ಯತೆ ಇದೆ ಎಂದು ಕ್ಲೂಗೆ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ ಮಾತ್ರೆಯ ಬಳಕೆಗೆ ಅನುಮೋದನೆ ನೀಡಿದ ವಿಶ್ವದ ಮೊದಲ ರಾಷ್ಟ್ರ ಬ್ರಿಟನ್ ಆಗಿದೆ. ಸೌಮ್ಯ ಪ್ರಮಾಣದ ಕೋವಿಡ್ ನಿಂದ ಮಧ್ಯಮ ಪ್ರಮಾಣದ ಕೋವಿಡ್ ಲಕ್ಷಣ ಹೊಂದಿರುವವರು ಮಾತ್ರೆ ಬಳಸಲು ಬ್ರಿಟನ್ ನ ಮೆಡಿಸನ್ಸ್ ಅಂಡ್ ಹೆಲ್ತ್ ಕೇರ್ ಪ್ರಾಡಕ್ಟ್ಸ್ ರೆಗುಲೇಟರಿ ಏಜೆನ್ಸಿ ( ಎಂಎಚ್ಆರ್ ಎ) ಶಿಫಾರಸು ಮಾಡಿದೆ.
ಕೋವಿಡ್, ‘ವಿಆಸಂ’ ಆತಂಕ
Date: