ಅಡುಗೆ ಅನಿಲ ಪೆಟ್ರೋಲ್ ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಪರಿಣಾಮ ಈಗ ಹೋಟೆಲ್ ತಿಂಡಿ ತಿನಿಸುಗಳ ದರವನ್ನು ಏರಿಸಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ.
ರಾಜ್ಯದ್ಯಂತ ನವಂಬರ್ 8 ರ ಬಳಿಕ ಶೇ.15 ರಿಂದ 20 ರಷ್ಟು ದರ ಹೆಚ್ಚಳ ಆಗುವ ಸಾಧ್ಯತೆ ಇದೆ. ದೋಸೆ, ಇಡ್ಲಿ ಇತ್ಯಾದಿ ತಿನಿಸುಗಳ ಬೆಲೆಯಲ್ಲಿ 5 ರುಪಾಯಿ ಏರಿಕೆಯಾಗುವ ಸಂಭವವಿದ್ದು ಆಹಾರ ಪ್ರಿಯರಿಗೆ ಇದು ಹೊರೆಯಾಗಲಿದೆ.
ವಾಣಿಜ್ಯ ಅಡುಗೆ ಅನಿಲದ ಸಿಲಿಂಡರ್ ದರ ನವೆಂಬರ್ 1ರಂದು ಏಕಾಏಕಿ 266 ರೂಪಾಯಿ ಹೆಚ್ಚಳ ಮಾಡಿರುವುದರಿಂದ ಹೋಟೆಲ್, ರೆಸ್ಟೋರೆಂಟ್ ಗಳ ಮೇಲೆ ತೀವ್ರ ಪರಿಣಾಮ ಬೀರಿದೆ ರಸ್ತೆಬದಿಯ ಫಾಸ್ಟ್ ಫುಡ್ ಮಳಿಗೆಗಳು ಮುಚ್ಚುವ ಪರಿಸ್ಥಿತಿಗೆ ತಲುಪಿದೆ.
ಈಗ ಪ್ರತೀ ಸಿಲಿಂಡರ್ ಬೆಲೆ 2063 ರೂಪಾಯಿ ಇದೆ ಹೋಟೆಲ್ಗಳಲ್ಲಿ ಅತಿ ಹೆಚ್ಚು ಖರ್ಚು ಬರುವುದರಲ್ಲಿ ಅಡುಗೆ ಅನಿಲ ಕೂಡ ಒಂದು. ನಾವು ತಿಂಡಿತಿನಿಸು ದರ ಏರಿಕೆ ಮಾಡದಿದ್ದರೆ ಬಾಗಿಲು ಮುಚ್ಚಬೇಕಾಗುತ್ತದೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಗಳ ಸಂಘ ಅಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ.