ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ ನಲ್ಲಿ ಗುರುವಾರ ಭಾರತೀಯ ಯೋಧರೊಂದಿಗೆ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಯೋಧರಿಗೆ ಸಿಹಿ ತಿನ್ನಿಸಿ, ” ದೇಶ ಕಾಯುವ ಧೈರ್ಯವಂತರಾದ ತಾವೇ ನನ್ನ ಕುಟುಂಬ” ಇಂದು ಯೋಧರನ್ನು ಉದ್ದೇಶಿಸಿ ಭಾವುಕ ಭಾಷಣ ಮಾಡಿದರು.
ವಿಶ್ವದಾದ್ಯಂತ ಯುದ್ಧ ಮಾದರಿಗಳು ದಿನೇದಿನೇ ಬಾರಿ ಬದಲಾವಣೆ ಕಾಣುತ್ತೇವೆ. ಈ ನಿಟ್ಟಿನಲ್ಲಿ ಹೋರಾಟಕ್ಕಾಗಿ ಅಗತ್ಯವಾದ ಮಿಲಿಟರಿ ಸಾಮರ್ಥ್ಯವನ್ನು ಭಾರತ ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇದಕ್ಕೆ ತಕ್ಕಂತೆ ಗಡಿಯಲ್ಲಿ ಸಂಪರ್ಕ ಹೆಚ್ಚಳ ಹಾಗೂ ಸೇನೆ ನಿಯೋಜನೆಗೆ ಅಗತ್ಯ ಮೂಲಭೂತ ಸೌಕರ್ಯ ಅಭಿವೃದ್ಧಿಗೊಳಿಸಲಾಗಿದೆ ಎಂದು ಮೋದಿಜಿಯವರು ಹೇಳಿದ್ದಾರೆ.
ಹಲವು ಸಾಮ್ರಾಜ್ಯಗಳು, ಕೌಟುಂಬಿಕ ಆಳ್ವಿಕೆಗಳು ಈ ನೆಲದಲ್ಲಿ ಬಂದುಹೋಗಿವೆ. ಕೇವಲ ಭೌಗೋಳಿಕ ಗಡಿಯನ್ನು ಕಾಯ್ದುಕೊಳ್ಳುವುದು ಮಾತ್ರವೇ ರಾಷ್ಟ್ರೀಯ ಭದ್ರತೆ ಅಲ್ಲ. ಭಾರತದಂತಹ ವಿಶಿಷ್ಟ ರಾಷ್ಟ್ರದ ವೈವಿದ್ಯತೆ, ಅಸ್ಮಿತೆ ಹಾಗೂ ಏಕತೆಯನ್ನು ಕಾಯ್ದುಕೊಳ್ಳುವುದು ಕೂಡ ರಾಷ್ಟ್ರೀಯ ಬದ್ಧತೆಯೇ ಆಗಿದೆ ಎಂದು ಯೋಧರನ್ನು ಉದ್ದೇಶಿಸಿ ಮೋದಿಜಿ ಮಾತನಾಡಿದರು.