ದೀಪಾವಳಿ ಎಂದರೆ ದೀಪಗಳ ಹಬ್ಬ. ಎಲ್ಲೆಲ್ಲಿಯೂ ಪಟಾಕಿಯ ಸದ್ದು. ದೀಪಾವಳಿಯು ನರಕ ಚತುರ್ಥಿಯಿಂದ ಆರಂಭ. ಮನೆಗಳಲ್ಲಿ ನೀರು ತುಂಬುವ ಹಬ್ಬ. ಎಲ್ಲರೂ ಎಣ್ಣೆ ಸ್ನಾನ ಮಾಡುವ ಪರಿಪಾಠ. ಹಬ್ಬ ಎಂದೂ ಅರ್ಥ ಕಳೆದುಕೊಂಡಿಲ್ಲ. ಆದರೆ ಈ ಎರಡು ವರ್ಷ ಕೊರೋನಾ ಮಹಾಮಾರಿಯ ಕರಾಳ ನೆರಳಿನಿಂದ ದೀಪ ಹಚ್ಚಿದರೂ, ಸಮಾಧಾನಕ್ಕೆ ಏನೋ ಕೊರತೆ. ದೀಪಾವಳಿ ಅಮಾವಾಸ್ಯೆಯಂದು ಸಾಮಾನ್ಯವಾಗಿ ಲಕ್ಷ್ಮಿ ಪೂಜೆ ಮತ್ತು ವಾಹನ ಪೂಜೆ ನಡೆಯುತ್ತದೆ. ಶಿವಮೊಗ್ಗದ ಸಾಗರ ರಸ್ತೆಯ ಇಕ್ಕೆಲ ಬಣ್ಣಬಣ್ಣದ ಚಂಡುಹೂ, ಸೇವಂತಿಗೆ, ಬಾಳೆಕಂಬ, ಹಸಿರು ಮಾವಿನ ಎಲೆ, ಮಹಾಲಿಂಗನ ಬಳ್ಳಿ ನೋಡುಗರ ಕಣ್ತುಂಬಿಕೊಳ್ಳುತ್ತಿದ್ದವು. ಇಲ್ ನೋಡಿ, ದೀಪ ಬೆಳಗಿಸಲು ವಿವಿಧ ವಿನ್ಯಾಸದ ವರ್ಣಮಯ ಹಣತೆಗಳು ದೀಪ ಹಚ್ಚುವವರಿಗಾಗಿ ಕಾಯುತ್ತಿವೆ. ಆದರೆ ಕೊಳ್ಳುವವರೇ ವಿರಳ. ದೂರದ ಹಾನಗಲ್ ನಿಂದ ಬಂದಿರುವ ಚೆಂಡು ಹೂ ಮಾರಾಟಗಾರ ಕಣ್ಣಲ್ಲಿ ಭರ್ಜರಿ ವ್ಯಾಪಾರ ತುಂಬಿಕೊಂಡಿದ್ದರು. ಆದರೆ, ಅವರು ನಮ್ಮೊಂದಿಗೆ ಮಾತನಾಡಿ, ಇಂದಿನ ಗ್ರಾಹಕರ ಪರಿಸ್ಥಿತಿ ಮತ್ತು ಹೂವಿನ ವ್ಯಾಪಾರದ ಬಗ್ಗೆ ತಿಳಿಸಿದರು.
ಹಬ್ಬ ಜೋರು : ಬೆಳಕಿಗೆ ಮಂಕು
Date: