ರಾಜ್ಯದ ಕೆಲವೆಡೆ ಇನ್ನೂ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನವಂಬರ್ ಮಧ್ಯದ ಬದಲಿಗೆ ಈ ತಿಂಗಳ ಅಂತ್ಯಕ್ಕೆ ಚಳಿಗಾಲ ಆರಂಭವಾಗಲಿದೆ.
ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾಗುತ್ತಿದೆ. ಇದರಿಂದ ಮಲೆನಾಡು ಮತ್ತು ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ತಣ್ಣನೆಯ ಗಾಳಿ ಬೀಸುತ್ತಿದೆ. ಇದು ಚಳಿಗಾಲ ಅಲ್ಲ ಶೀತಗಾಳಿ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.
ಈ ವರ್ಷ ನವೆಂಬರ್ 6ರವರೆಗೂ ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ. ಅನಂತರ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ತಿಂಗಳ ಅಂತ್ಯಕ್ಕೆ ಚಳಿಗಾಲ ಆರಂಭವಾಗುತ್ತದೆ ಎನ್ನುತ್ತಾರೆ ತಜ್ಞರು.
ಮಳೆ ತರುವ ಯಾವುದೇ ಚಂಡಮಾರುತಗಳು ಸೃಷ್ಟಿಯಾಗದಿದ್ದರೆ ನವೆಂಬರ್ ಮಧ್ಯದ ವೇಳೆಗೆ ಚಳಿಗಾಲ ಪ್ರಾರಂಭವಾಗಬಹುದು ಎಂದು ಹವಾಮಾನ ತಜ್ಞರು ಸೂಚಿಸಿದ್ದಾರೆ.
ಉತ್ತರ ಭಾರತದ ರಾಜ್ಯಗಳಲ್ಲಿ ಯಾವಾಗ ಚಳಿ ಆರಂಭವಾಗುತ್ತದೆಯೋ, ಅದಾಗಿ ಕೆಲವೇ ದಿನದಲ್ಲಿ ಅಲ್ಲಿಂದ ತೇವಾಂಶವನ್ನು ಮಾರುತಗಳು ನಮ್ಮ ರಾಜ್ಯದ ಕಡೆಗೆ ಹೊತ್ತು ತರುತ್ತವೆ. ಆಗ ರಾಜ್ಯದಲ್ಲಿ ಚಳಿ ಆರಂಭವಾಗುತ್ತದೆ. ನಮ್ಮ ರಾಜ್ಯದಲ್ಲಿ ನವೆಂಬರ್ ಅಂತ್ಯಕ್ಕೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಚಳಿ ಪ್ರಾರಂಭವಾಗುತ್ತದೆ ಎಂದು ಹವಾಮಾನ ತಜ್ಞ ಶ್ರೀನಿವಾಸ್ ರೆಡ್ಡಿ ಅವರು ಹೇಳಿದ್ದಾರೆ.
ಬೇಗ ಬರಲಿದೆ ಗಡಗಡ ಚಳಿ
Date: