ಇಂಗಾಲ ಹೊರಸೂಸುವಿಕೆಯ ಕಡಿತದ ಬದ್ಧತೆಗೆ ರಾಷ್ಟ್ರಗಳು ವಿಫಲವಾದರೆ, ಪ್ರತಿ ದೇಶವೂ ತಮ್ಮ ಹವಾಮಾನ ವೈಪರೀತ್ಯ ತಡೆ ಯೋಜನೆ ಮತ್ತು ನೀತಿಯನ್ನು ಪರಿಷ್ಕರಿಸುತ್ತಲೇ ಇರಬೇಕು. ಇದು ಐದು ವರ್ಷಕ್ಕೆ ಒಮ್ಮೆ ಆದರೆ ಸಾಲದು, ಪ್ರತಿವರ್ಷವೂ ಮಾಡಲೇಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಹೇಳಿದ್ದಾರೆ.
ಹವಾಮಾನ ವೈಪರೀತ್ಯವನ್ನು ತಡೆಗಟ್ಟುವ ಮೂಲಕ ಮಾನವ ಕುಲವನ್ನು ರಕ್ಷಿಸಬೇಕು ಎಂದು ಜಾಗತಿಕ ನಾಯಕರಿಗೆ ಗ್ಲಾಸ್ಕೋ ಹವಾಮಾನ ವೈಪರಿತ್ಯ ತಡೆ ಶೃಂಗಸಭೆಯು ಕರೆ ಕೊಟ್ಟಿದೆ.
ಶೃಂಗಸಭೆಯು ವಿಫಲವಾದರೆ ,ಜನರ ಆಕ್ರೋಶವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಮುಂದಿನ ತಲೆಮಾರುಗಳು ‘ನಮ್ಮನ್ನು ಕ್ಷಮಿಸದು’ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಎಚ್ಚರಿಕೆ ಕೊಟ್ಟಿದ್ದಾರೆ.
ಭಾರತದ ಹಾಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಕೃಷಿಗೂ ಹವಾಮಾನ ಬದಲಾವಣೆಯು ಬಹುದೊಡ್ಡ ಸವಾಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕುಡಿಯುವ ನೀರಿನಿಂದ ಕೈಗೆಟುಕುವ ದರದವರೆಗೆ ಎಲ್ಲವೂ ಹವಾಮಾನ ಬದಲಾವಣೆ ತಡೆಗೆ ಪೂರಕವಾಗಿರಬೇಕು ಎಂದು ಅವರು ಹೇಳಿದರು.
ಶ್ರೀಮಂತ ರಾಷ್ಟ್ರಗಳು ಇಂಗಾಲ ಹೊರಸೂಸುವಿಕೆಯನ್ನು ಈಗಿನ ಮಟ್ಟಕ್ಕೆ ಸ್ಥಗಿತಗೊಳಿಸಬೇಕು. ಆ ಮೂಲಕ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಇಂಗಾಲ ಹೊರಸೂಸುವಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಭಾರತವು ಒತ್ತಾಯಿಸಿದೆ.
ಮನುಜ ಕುಲ ಸಂರಕ್ಷಣೆಗೆ ಕರೆ
Date: