ಜಿ -20 ಶೃಂಗದಲ್ಲಿ ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪನಿಗಳಿಗೆ ಶೇ.15 ಗ್ಲೋಬಲ್ ಮಿನಿಮಮ್ ಟ್ಯಾಕ್ಸ್ ವಿಧಿಸುವ ವಿಚಾರ, ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಬಳಕೆ ಕಡಿಮೆ ಮಾಡಿ, ನವೀಕರಿಸಬಹುದಾದ ಇಂಧನ ಬಳಕೆಗೆ ಆದ್ಯತೆ ನೀಡುವುದು, ಹಸಿರು ಮನೆ ಅನಿಲ ಹೊರಸೂಸುವಿಕೆ ಕಡಿಮೆ ಮಾಡುವುದು ಮುಂತಾದ ವಿಷಯಗಳು ಚರ್ಚೆಗೆ ಒಳಗಾದವು.
ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್ ಗೆ ಮಿತಿಗೊಳಿಸಲು 2015ರ ಪ್ಯಾರಿಸ್ ಸಮ್ಮೇಳನದಲ್ಲಿ ಜಾಗತಿಕ ನಾಯಕರು ಸಮ್ಮತಿಸಿದ್ದರು. ಇದು ಪರಾಮರ್ಶೆ ಈ ಸಿಒಪಿ 26 ಶೃಂಗಸಭೆಯಲ್ಲಿ ನಡೆಯಲಿದೆ. ಕಳೆದ ಒಂದೂವರೆ ಶತಮಾನದಲ್ಲೇ ಇಳೆ 1.1 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಯಾಗಿದೆ. ಇದನ್ನು ಆಧಾರವಾಗಿಟ್ಟುಕೊಂಡು 2030ರ ವೇಳೆಗೆ 1.5 ಡಿಗ್ರಿ ಸೆಲ್ಸಿಯಸ್ ಮಿತಿ ದಾಟಲಿದೆ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.
‘ಚೀನಾ ಸೇರಿ ಪ್ರಮುಖ ರಾಷ್ಟ್ರಗಳು ಕಲ್ಲಿದ್ದಲು ಯೋಜನೆ ಸ್ಥಗಿತಗೊಳಿಸುವ ವಿಚಾರದಲ್ಲಿ ಬದ್ಧತೆ ತೋರಿಸಬೇಕು. ಗ್ಲಾಸ್ಗೋವ್ ನಲ್ಲಿ ಈ ಬಗ್ಗೆ ಘೋಷಣೆ ಮಾಡಿ ಪರಿಸರ ಸ್ನೇಹಿ ಇಂಧನ ಬಳಕೆ ಕಡೆಗೆ ಗಮನ ಹರಿಸಬೇಕು” ಎಂದು ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದರು.
ಜಗತ್ತಿನ ದೊಡ್ಡ ಅರ್ಥವ್ಯವಸ್ಥೆಯ ನಾಯಕರು ಜಿ-20 ಶೃಂಗದ ಎರಡನೇ ಮತ್ತು ಕೊನೆಯ ದಿನ ಹವಾಮಾನ ವೈಪರಿತ್ಯದ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿ ಮಾತನಾಡಿದರು.
ಸ್ಕಾಟ್ಲೆಂಡ್ ನ ಗ್ಲಾಸ್ಗೋವ್ ನಲ್ಲಿ ಸಿಒಪಿ 26 ಶೃಂಗ ಶುರುವಾಗಿದ್ದು, ಮುಂದಿನ ಎರಡು ವಾರಗಳ ವಿವಿಧ ರಾಷ್ಟ್ರಗಳ ನಾಯಕರು ಹವಾಮಾನ ವೈಪರಿತ್ಯ ತಡೆಗೆ ತೆಗೆದುಕೊಂಡ ಕ್ರಮಗಳ ವಿವರವನ್ನು ಜಗತ್ತಿನೆದುರು ಪ್ರಸ್ತುತಪಡಿಸಲಿದ್ದಾರೆ.
ಜಗತ್ತಿನ ಹಸಿರು ಮನೆ ಅನಿಲ ಹೊರಸೂಸುವಿಕೆಯ 4ನೇ ಮೂರಂಶದಷ್ಟು ಹೊಂದಿರುವ ಜಿ-20 ರಾಷ್ಟ್ರಗಳು, ಏರುತ್ತಿರುವ ತಾಪಮಾನ ಕಡಿಮೆ ಮಾಡಲು ಬಡರಾಷ್ಟ್ರಗಳಿಗೆ ನೆರವಾಗುತ್ತ, ತಮ್ಮ ದೇಶಗಳಲ್ಲಿ ಮಾಲಿನ್ಯ ತಡೆಗೆ ಹೇಗೆ ಎಲ್ಲರಿಗೂ ಹೊಂದುವಂತಹ ಕ್ರಮ ತೆಗೆದುಕೊಳ್ಳುವುದು ಎಂಬ ಬಗ್ಗೆ ಚಿಂತನೆ ನಡೆಸಿವೆ.
ಆಸ್ಟ್ರೇಲಿಯಾ, ರಷ್ಯಾ, ಜಪಾನ್, ಚೀನಾ ಮತ್ತು ಭಾರತ ದೇಶಗಳು ಹವಾಮಾನ ವೈಪರಿತ್ಯ ಕಡೆಗೆ ಸಂಬಂಧಿಸಿ ಬದ್ಧತೆಯನ್ನು ತೋರಿಸಬೇಕು. ಪ್ರತಿರೋಧದ ಭಾಷೆಯನ್ನು ಬಿಟ್ಟು ಪ್ಯಾರಿಸ್ ಒಪ್ಪಂದ ಅಂಶಗಳಿಗೆ ಅನುಗುಣವಾಗಿ ಕ್ರಮಗಳನ್ನು ನಿಶ್ಚಿತ ಗಡುವಿನೊಳಗೆ ಜಾರಿಗೊಳಿಸಬೇಕು ಎಂದು ಐರೋಪ್ಯ ಒಕ್ಕೂಟ ಆಗ್ರಹಿಸಿದೆ.
ಜಿ -20 : ಜಾಗತಿಕ ತಾಪಮಾನಕ್ಕೆ ನಿಯಂತ್ರಣ
Date: