ಇಸ್ರೇಲ್ ನಿರ್ಮಿತ ಪೆಗಾಸಸ್ ತಂತ್ರಾಂಶ ಬಳಸಿ ಗೂಢಚರ್ಯೆ ಮಾಡಲಾಗುತ್ತಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ವರದಿಯು ಆಗಾಗ ಕಾಣಿಸಿಕೊಳ್ಳುತ್ತಿದೆ.
ಕೇಂದ್ರ ಸರ್ಕಾರವು ಈಗಾಗಲೇ ಸುಪ್ರೀಂ ಗೆ ಉತ್ತರಿಸಿದ್ದರೂ, ಅದು ತೃಪ್ತಿಕರವಲ್ಲವೆಂದು ಅಭಿಪ್ರಾಯ ಪಟ್ಟ ಸುಪ್ರೀಂ ಕೋರ್ಟ್ ವಿಚಾರಣೆಗೆ ಒಳಪಡಿಸಿತ್ತು.ಈ ವಿಚಾರವಾಗಿ ತನಿಖೆ ನಡೆಸುವುದಕ್ಕೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಿದೆ.
ಪೆಗಾಸಸ್ ಕುರಿತ 12 ದಾವೆಗಳ ಸಂಯೋಜಿತ ಕೇಸ್ ನ ವಿಚಾರಣೆಯ ತೀರ್ಪು ಪ್ರಕಟಿಸುವ ಮುನ್ನ ಸಿಜೆಐ ಎನ್.ವಿ. ರಮಣ ಅವರು,’ಒಂದು ರಹಸ್ಯವನ್ನು ಕಾಪಾಡಬೇಕು ಎಂದು ನೀವು ಬಯಸಿದರೆ, ಅದನ್ನು ನೀವು ನಿಮ್ಮಿಂದಲೇ ಬಚ್ಚಿಟ್ಟುಕೊಳ್ಳಬೇಕು’ ಎಂಬ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ದೇಶದಲ್ಲಿ ಖಾಸಗೀತನದ ಹಕ್ಕುಗಳ ರಕ್ಷಣೆ ಕುರಿತು ಆಗಾಗ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ‘ ಡಿಜಿಟಲ್ ಅತ್ಯವಶ್ಯಕ’ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಈ ದೆಸೆಯಲ್ಲಿ ಕೇಂದ್ರವೇ ಸಮಿತಿಯನ್ನು ರಚಿಸಿದರೆ ಪೂರ್ವಾಗ್ರಹಕ್ಕೆ ಅವಕಾಶವಾದಂತಾಗುತ್ತದೆ. ಆದ ಕಾರಣ ಸುಪ್ರೀಂ ಮಧ್ಯ ಪ್ರವೇಶ ಮಾಡಿ ನ್ಯಾಯಯುತ ಸಮಿತಿಗೆ ಅವಕಾಶ ಕೊಟ್ಟಿದೆ.
ಮುಖ್ಯವಾಗಿ ಈ ತನಿಖೆಯು ಭಾರತೀಯ ನಾಗರಿಕರ ಮೊಬೈಲ್ ಅಥವಾ ಇತರೆ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಪೆಗಾಸಸ್ ರಹಸ್ಯ ಜಾಲ ಬೀಸಿದೆಯೇ ? ಅವುಗಳಲ್ಲಿನ ದತ್ತಾಂಶವನ್ನು ಪಡೆಯಲಾಗಿದೆಯೇ? ಎಂಬ ಮುಂತಾದ ಗಹನೀಯ ಅಂಶಗಳ ಕುರಿತು ತನಿಖೆ ಬೆಳಕು ಚೆಲ್ಲಬೇಕಿದೆ.
ಈ ಸಮಿತಿಯಲ್ಲಿ ತನಿಖೆಯ ಉಸ್ತುವಾರಿಯಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಕಾರ್ಯನಿರ್ವಹಿಸಲಿದ್ದಾರೆ.
ಇವರ ಜೊತೆಗೆ ನಿವೃತ್ತ ಐಪಿಎಸ್ ಅಧಿಕಾರಿ ಅಲೋಕ್ ಜೋಶಿ, ಅಂತರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆಯ ಸಂದೀಪ್ ಒಬೆರಾಯ್, ನವೀನ್ ಕುಮಾರ್ ಚೌಧರಿ, ಗಾಂಧಿನಗರದ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಸೈಬರ್ ಭದ್ರತೆ ಮತ್ತು ಡಿಜಿಟಲ್ ವಿಜ್ಞಾನ ವಿಭಾಗದ ಡೀನ್, ಪ್ರಭಾಹರನ್ ಪಿ., ಅಮೃತ ವಿಶ್ವ ವಿದ್ಯಾಪೀಠಂ, ಹಾಗೂ ಐಐಟಿ ಬಾಂಬೆಯ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಅಶ್ವಿನ್ ಅನಿಲ್ ಗುಮಸ್ತೆ, ಕಾರ್ಯನಿರ್ವಹಿಸಲಿದ್ದಾರೆ.
ಪೆಗಾಸಸ್ : ತನಿಖಾ ಸಮಿತಿ ರಚನೆ
Date: