ಅಕ್ಟೋಬರ್ 24 ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ನಡೆದಿದೆ. ಭಾರತ ತಂಡದ ವಿರುದ್ಧ ಪಾಕಿಸ್ತಾನ ತಂಡವು ಭರ್ಜರಿ ಜಯ ಸಾಧಿಸಿದೆ.
ದುಬೈ ನಲ್ಲಿ ನಡೆದ ಪಂದ್ಯದಲ್ಲಿ ಪಾಕ್ ತಂಡವು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಭಾರತ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು.
151ರನ್ ಗಳನ್ನ ಗುರಿಯನ್ನಿಟ್ಟುಕೊಂಡು ಆಟ ಆರಂಭಿಸಿದ ಪಾಕಿಸ್ತಾನವು ಭಾರಿ ಜಯ ಗಳಿಸಿತು.
ಭಾರತ ತಂಡದ ಒಟ್ಟು ಜವಾಬ್ಧಾರಿ ವಹಿಸಿಕೊಂಡಿದ್ದ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ತೋರಿದರು.
4 ನೇ ವಿಕೆಟ್ ಹಂತಕ್ಕೆ ಕಾಲಿಟ್ಟ ಆಟ ಆಡಿದ ಅವರು 52 ರನ್ ಗಳಿಸಿದರು. ಅರ್ಧಶತಕದೊಂದಿಗೆ ಹೋರಾಟ ಮಾಡಿ ರನ್ ರೇಟ್ ಅನ್ನು ಹೆಚ್ಚಿಸಿದರು. ಇವರೊಟ್ಟಿಗೆ ರಿಷಭ್ ಅತ್ಯಂತ ಚುರುಕಾಗಿ ಸಿಕ್ಸರ್ ಮೂಲಕ ರನ್ ಗಳಿಸಿ ಭರವಸೆ ಮೂಡಿಸಿದರು. ಭಾರತ ತಂಡ ಆರಂಭದಲ್ಲಿಯೇ 3 ವಿಕೆಟ್ ಕಳೆದುಕೊಂಡು ಬಹಳಷ್ಟು ಪ್ರಯಾಸ ಪಡಬೇಕಾಯಿತು .
ಪಾಕ್ ಅತ್ಯಂತ ಬಿರುಸಾಗಿಯೇ ಇನ್ನಿಂಗ್ಸ್ ಆರಂಭಿಸಿತು. ಒಂದೇ ಒಂದು ವಿಕೆಟ್ ಕೂಡ ಗಳಿಸಲು ನಮ್ಮ ಬೌಲರ್ ಗಳು ಸಾಧ್ಯವಾಗಲಿಲ್ಲ.
ನಿರಾಯಾಸವಾಗಿ ಪಾಕ್ ತಂಡವು 10 ವಿಕೆಟ್ ಗಳಿಂದ ವಿರಾಟ್ ಕೊಹ್ಲಿ ಬಳಗವನ್ನ ಸೋಲಿಸಿತು.
ಆರಂಭದಲ್ಲಿಯೇ 3 ವಿಕೆಟ್ ಕಳೆದುಕೊಂಡಿದ್ದು, ಭಾರತ ತಂಡದ ಹಿನ್ನೆಡೆಗೆ ಪ್ರಮುಖ ಕಾರಣ. ಗೆಲ್ಲುವ ಯೋಜನೆಯನ್ನು ಜಾರಿಗೆ ತರುವಲ್ಲಿ ಇಡೀ ತಂಡ ಸಫಲವಾಗಲಿಲ್ಲ. ಇವತ್ತಿನ ಪಂದ್ಯದಲ್ಲಿ ಭಾರತಕ್ಕಿಂತಲೂ ಎದುರಾಳಿ ಪಾಕ್ ತಂಡವು ಚೆನ್ನಾಗಿ ಆಡಿದೆ. ಮೊಟ್ಟ ಮೊದಲ ಬಾರಿಗೆ ಟಿ – 20 ವಿಶ್ವಕಪ್ ಟೂರ್ನಿಯಲ್ಲಿ ಬದ್ಧ ಎದುರಾಳಿ ತಂಡದ ವಿರುದ್ಧ ಸೋತಿದ್ದೇವೆ. ಭಾರತ ತಂಡದ ಆಟಗಾರರಲ್ಲಿ ಮತ್ತು ಅಭಿಮಾನಿಗಳಲ್ಲಿ ಬಹಳಷ್ಟು ನಿರಾಸೆ ಮೂಡಿದೆ.
ಇದು ಟೂರ್ನಿಯ ಮೊದಲ ಪಂದ್ಯವಷ್ಟೇ ಇನ್ನೂ ಬಹಳಷ್ಟು ಪಂದ್ಯಗಳಿವೆ ಆ ಪಂದ್ಯಗಳಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿ ಚೆನ್ನಾಗಿ ಆಡುತ್ತೇವೆ ಎಂದು ಪಂದ್ಯದ ನಂತರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದರು.
ಪಾಕಿಸ್ತಾನದ ತಂಡದಲ್ಲಿ ಮೊದಲ ಜೋತೆಯಾಟದಲ್ಲಿ ಬ್ಯಾಟಿಂಗ್ ಆಟ ಆಡಿದ ಬಾಬರ್ ಆಜಂ ಮತ್ತು ಮೊಹಮ್ಮದ್ ರಿಜ್ವಾನ್ ರವರ ಭರ್ಜರಿ ಪ್ರದರ್ಶನದೊಂದಿಗೆ ಬಾಬರ್ ಔಟಾಗದೆ 68 ರನ್ ಮತ್ತು ರಿಜ್ವಾನ್ ಔಟಾಗದೆ 78 ರನ್ ಗಳ ಮೂಲಕ ಗೆಲುವು ಸದಿಸಿ 10 ವಿಕೆಟ್ ಗಳಿಂದ ಭಾರತ ತಂಡವನ್ನು ಸೋಲಿಸಿದರು..