ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ನೂತನ ರೈಲ್ವೆ ಸಂಪರ್ಕ ಕಲ್ಪಿಸಲು ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪನವರು ಮತ್ತು ಸಂಸದರಾದ ಬಿ. ವೈ. ರಾಘವೇಂದ್ರ ಅವರು ಅವಿರತ ಪ್ರಯತ್ನವನ್ನು ನೆಡೆಸಿದ್ದರು.
ಈ ಸಂಬಂಧ ರಾಣಿಬೆನ್ನೂರು- ಶಿಕಾರಿಪುರ ರೈಲ್ವೆ ಮಾರ್ಗವನ್ನು ಕೇಂದ್ರದ ರೈಲ್ವೆ ಅಧಿಕಾರಿಗಳು ತಂಡವು ಮಂಗಳವಾರ
– ರಾಣಿಬೆನ್ನೂರಿನಿಂದ ಶಿಕಾರಿಪುರ – ಶಿವಮೊಗ್ಗವರೆಗೆ ನೂತನ ಮಾರ್ಗದಲ್ಲಿ ಆಗಮಿಸಿ ಪರಿಶೀಲಿಸಿ ಈ ಯೋಜನೆಗೆ ಬೇಕಾದ ಮಾಹಿತಿ, ಭೂ ಸ್ವಾಧೀನ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಸಂಸದರ ಅಧ್ಯಕ್ಷತೆಯಲ್ಲಿ ಸಭೆ ನೆಡೆಸಿ ದೀರ್ಘ ಸಮಾಲೋಚನೆ ಮಾಡಿ ಶೀಘ್ರವಾಗಿ ಸಮಸ್ಯೆ ಪರಿಹರಿಸಿ ತ್ವರಿತವಾಗಿ ಕಾಮಗಾರಿ ಪ್ರಾರಂಭಿಸಲು ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ವಿಷಯವಾಗಿ ಡಿಸೆಂಬರ್ ಕೊನೆಯ ವಾರ ಅಥವಾ ಜನವರಿಯಲ್ಲಿ ಮೊದಲನೇ ಹಂತದ ಕಾಮಗಾರಿಯನ್ನ ಪ್ರಾರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಶಿವಮೊಗ್ಗದ ಸೊಗನೆಯ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ತಾಂತ್ರಿಕ ವಿಷಯಗಳ ಬಗ್ಗೆ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚೆ ನೆಡೆಸಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸೂಚಿಸಿದರು.ಈ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳಾದ ಹರಿ ಬಾಬು. IRSE. ಜೆನರಲ್ ಮ್ಯಾನೇಜರ್.ಎಂ. ಜಿ. ಸುದೀಪ್. ಸೀನಿಯರ್ ಡಿ. ಜಿ. ಎಂ.ಶ್ರೀನಿವಾಸ್. ಜೆ. ಜಿ. ಎಂ, ಎಂ. ರಾಜು ಆಡಿಷನಲ್ ಜೆನರಲ್ ಮ್ಯಾನೇಜರ್ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.